ಎಂ ಎಸ್ ಮುಹಮ್ಮದ್ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಮನವಿ
ದ.ಕ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ.ಎಸ್ ಮಹಮ್ಮದ್ ರವರಿಗೆ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿಬೇಕು, ಮುಸ್ಲಿಂ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕೊಡಬೇಕೆಂದು ಮುಸ್ಲಿಂ ಸಮುದಾಯ ಒಕ್ಕೂಟ ಪುತ್ತೂರು(UMC) ವತಿಯಿಂದ ಕಾಂಗ್ರೆಸ್ ದಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. 50ಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.
ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರೂ ಆಗಿರುವ ಎಂ ಎಸ್ ಮುಹಮ್ಮದ್ ಅವರಿಗೆ ಸದ್ಯದಲ್ಲೇ ಸೂಕ್ತ ಸ್ಥಾನಮಾನ ನೀಡಬೇಕೆಂದು ನಿಯೋಗ ಒತ್ತಾಯ ಮಾಡಿದೆ.