ಬಿಜೆಪಿಯ ಅತೃಪ್ತ ನಾಯಕರು ಕಾಂಗ್ರೆಸ್ ಸೇರ್ಪಡೆಗೆ ಸಿದ್ದರಾಮಯ್ಯ ವಿರೋಧ?
ಬೆಂಗಳೂರು: ಟಿಕೆಟ್ ವಂಚಿತಗೊಂಡು ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಕಾಂಗ್ರೆಸ್ ಸೇರ್ಪಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ. ಬಿಜೆಪಿ ಅಸಮಾಧಾನಿತ ನಾಯಕರು ಚುನಾವಣೆ ವೇಳೆ ತಮಗೆ ಬಿಜೆಪಿಯಿಂದ ಅನ್ಯಾಯ ಆದಾಗ ಕಾಂಗ್ರೆಸ್‌ಗೆ ಬರುವುದು ಬೇಡ ಎಂದು ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸದಾನಂದ ಗೌಡ ಸಹಿತ ಬಿಜೆಪಿಯ ಹಲವು ಅತೃಪ್ತ ನಾಯಕರ ಕಾಂಗ್ರೆಸ್ ಸೇರುವ ಯೋಜನೆ ಪ್ಲಾಪ್ ಆಗಿದೆ ಎನ್ನಲಾಗುತ್ತಿದೆ.
ಆದರೆ ಆಪರೇಷನ್‌ಗೆ ಒಪ್ಪದ ಸಿದ್ದರಾಮಯ್ಯ ಬಿಜೆಪಿಯ ನಾಯಕರು ಚುನಾವಣೆ ವೇಳೆ ಕಾಂಗ್ರೆಸ್ ಸೇರಿ ಟಿಕೆಟ್ ಪಡೆಯುವುದು ಬೇಡ. ಜಗದೀಶ್ ಶೆಟ್ಟರ್ ಕೇಸ್‌ನಿಂದ ನಾವು ಪಾಠ ಕಲಿತಿದ್ದೇವೆ. ಸೋತರೂ, ಗೆದ್ದರೂ ನಮ್ಮ ಪಕ್ಷದವರೇ ಆಗಲಿ. ಇನ್ನೊಮ್ಮೆ ಆ ರೀತಿಯ ತಪ್ಪು ಮಾಡಬಾರದು. ಬರುವುದಿದ್ದರೆ ಚುನಾವಣೆ ನಂತರ ಕಾಂಗ್ರೆಸ್‌ಗೆ ಬರಲಿ ಎಂದು ಹೇಳಿ ಆಪರೇಷನ್ ಕಾಂಗ್ರೆಸ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.