ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಪುತ್ತೂರು: ಕಾಂಗ್ರೆಸ್ ಮುಖಂಡ ಕಾವು ಹೇಮಾನಾಥ ಶೆಟ್ಟಿ ಪ್ರಯಾಣಿಸುತಿದ್ದ ಇನ್ನೋವಾ ಕಾರು ಬೆದ್ರಾಳ ಸಮೀಪ ಅಪಘಾತ ಸಂಭವಿಸಿದ ಘಟನೆ ಫೆ 24 ರಂದು ರಾತ್ರಿ ನಡೆದಿದೆ.

ಪುರುಷರಕಟ್ಟೆ ಕಡೆಗೆ ಹೋಗುತ್ತಿದ್ದ ಹೇಮನಾಥ ಶೆಟ್ಟಿ ಅವರ ಇನ್ನೋವಾ ಕಾರಿಗೆ ವಿರುದ್ದ ದಿಕ್ಕಿನಿಂದ ಅಡ್ಡಾದಿಡ್ಡಿಯಾಗಿ ಚಲಿಸುತ್ತಾ ಬಂದ ಕಾರನ್ನು ಗಮನಿಸಿ ಅಪಘಾತ ತಪ್ಪಿಸಲು ಇನ್ನೋವಾ ಕಾರು ಚಾಲಕ ರಸ್ತೆ ಬದಿಗೆ ಚಲಾಯಿಸುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿರುವ ಕಲ್ಲಿನ ಕಟ್ಟೆಗೆ ಇನ್ನೋವಾ ಕಾರು ಬಡಿದಿದ್ದು ಈ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ಜಖಂಗೊಂಡಿದೆ.
ಇನ್ನೋವಾ ಕಾರಿನಲ್ಲಿಪ್ರಯಾಣಿಸುತಿದ್ದ ಹೇಮನಾಥ ಶೆಟ್ಟಿ ಹಾಗೂ ಅವರ ಬಳಗದವರಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.