ಭಜಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಬರಹ ಆರೋಪ: ಉಪ ವಲಯ ಅರಣ್ಯಾಧಿಕಾರಿ ಅಮಾನತು
ಕಳೆದ ಕೆಲವು ದಿನಗಳ ಹಿಂದೆ ಸಂಚಲನವನ್ನೇ ಮೂಡಿಸಿದ್ದ ಭಜಕರ ಬಗ್ಗೆ ನಿಂದನೆ ಬರಹ ಆರೋಪವನ್ನು ಎದುರಿಸುತ್ತಿದ್ದ ಕೊಯಿಲ ಶಾಖೆಯ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರರನ್ನು ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಇವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಜೀವ ಪೂಜಾರಿಯವರು ಭಜನೆ ಮತ್ತು ಭಜಕರ ವಿರುದ್ಧ ಲೇಖನವನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು ಎಂಬ ಆರೋಪ ಹಿಂದೂ ಪರ ಸಂಘಟನೆಯವರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದರ ವಿರುದ್ದ ಬಜರಂಗದಳದ ಕಾರ್ಯಕರ್ತರು ಇವರ ಅಮಾನತಿಗೆ ಒತ್ತಾಯಿಸಿ ಬೆಳ್ಳಾರೆ ಪೋಲಿಸ್ ಠಾಣೆಯ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದ ಘಟನೆಯು ನಡೆದಿತ್ತು. ಅಲ್ಲದೇ ಪುತ್ತೂರು ಮತ್ತು ಇತರ ಕಡೆಗಳಲ್ಲಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆದಿತ್ತು
ಈ ಎಲ್ಲಾ ಕಾರಣಗಳಿಂದ ಇವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.