ನೆ.ಮುಡ್ನೂರು: ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆಗೆ ಯತ್ನ, ಜೀವ ಬೆದರಿಕೆ-ಪ್ರಕರಣ ದಾಖಲು
ಪುತ್ತೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ವರದಿಯಾಗಿದೆ.
ಭವಾನಿ (62.ವ) ಎಂಬವರ ದೂರಿನಂತೆ, ಸದ್ರಿಯವರು ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಮೆನಸಿನಕಾನ ಎಂಬಲ್ಲಿ ಜಮೀನು ಹೊಂದಿದ್ದು, ಜಮೀನಿನಲ್ಲಿ ಫೆ.18ರಂದು ಸಂಜೆ ತನ್ನ ಗಂಡನೊಂದಿಗೆ ಕೆಲಸ ಮಾಡುತ್ತಿರುವಾಗ, ಗೋಪಾಲಕೃಷ್ಣ ಕುಂಜತ್ತಾಯ ಮತ್ತು ಅವರ ಮಗ ಅಶ್ವಿತ್ ಕುಂಜತ್ತಾಯ ಎಂಬವರು, ಅಕ್ರಮವಾಗಿ ಜಮೀನಿಗೆ ಕತ್ತಿ ದೊಣ್ಣೆಗಳೊಂದಿಗೆ ಪ್ರವೇಶ ಮಾಡಿ, ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆಗೆ ಪ್ರಯತ್ನಿಸಿರುತ್ತಾರೆ. ಅದಲ್ಲದೇ ಜೀವ ಬೆದರಿಕೆಯೊಡ್ಡಿ ನಮ್ಮ ಜಾಗದಲ್ಲಿನ ರಬ್ಬರ್ ಹಾಲು ತೆಗೆಯುವ ಸಲಕರಣೆಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಎಂಬುದಾಗಿ ಭವಾನಿ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.