ಕರಾವಳಿರಾಜಕೀಯ

ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ:
ಪಕ್ಷದ ನಾಯಕರು ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಿ: ಡಿಕೆ ಶಿವಕುಮಾರ್



ಮಂಗಳೂರು: ಉಭಯ ಜಿಲ್ಲೆಗಳಲ್ಲಿ 9 ಸೀಟು ಗೆಲ್ಲುವ ವಿಶ್ವಾಸ ಇತ್ತು. ಜಿಲ್ಲೆಯ ಫಲಿತಾಂಶ ಸಮಾಧಾನ ತಂದಿಲ್ಲ. ನಾಯಕರು ಬೂತ್ ಮಟ್ಟದಲ್ಲಿ ಕೆಲಸ ಮಾಡಿ ನಾಯಕರೆಂದು ತೋರಿಸಿಕೊಳ್ಳಬೇಕು. ಬೂತ್ ಮಟ್ಟದಲ್ಲಿ ಕೆಲಸ ಮಾಡಿದವ ಮಾತ್ರ ನಾಯಕ. ನಾನು ಬರುವಾಗ ಏರ್ ಪೋರ್ಟಲ್ಲಿ ಸೂಟು ಬೂಟು ಹಾಕಿ ನಿಂತವ ಮಾತ್ರ ನಾಯಕನಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.


ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಿರಲಿಲ್ಲ ಆದರೆ ಈ ಬಾರಿ ಎಲ್ಲವನ್ನೂ ಗೆದ್ದಿದ್ದೇವೆ. ಸಿ ಟಿ ರವಿಯವರ ನಾಲಗೆ ಬಹಳ ಉದ್ದ ಇತ್ತು ಜನ ಅದನ್ನು ತಿರಸ್ಕರಿಸಿದ್ದಾರೆ.
ಪಕ್ಷ ಮುಖ್ಯ ವ್ಯಕ್ತಿ ಮುಖ್ಯ ಅಲ್ಲ. ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ. ಕಾಂಗ್ರೆಸ್ ನವರನ್ನು ಕಾಂಗ್ರೆಸ್ ನವರೇ ಮುಗಿಸುತ್ತಿದ್ದಾರೆ. ಬಿಜೆಪಿಯವರು 15 ಲಕ್ಷ ಕೊಡುವುದಾಗಿ ಹೇಳಿದ್ರು ಕೊಟ್ಟಿಲ್ಲ, ಉದ್ಯೋಗ ಕೊಟ್ಟಿಲ್ಲ ಎಂದು ಆರೋಪಿಸಿದ ಅವರು ನಾವು ಗ್ಯಾರಂಟಿ ಯೋಜನೆ ಕೊಡುವುದಾಗಿ ಹೇಳಿದ್ದೆವು ನುಡಿದಂತೆ ನಡೆದಿದ್ದೇವೆ. 5 ಗ್ಯಾರಂಟಿಗಳು ಜನತೆಗೆ ಪ್ರಯೋಜನ ತಂದಿದೆ ಎಂಬ ವಿಚಾರ ತಿಳಿದು ಸಂತೋಷವಾಯಿತು. ಗ್ಯಾರಂಟಿ ಯೋಜನೆಗಿಂತ ಮಿಗಿಲಾಗಿ ನಾವು ಏನನ್ನು ಕೊಡಲು ಸಾಧ್ಯ ಎಂದು ಪ್ರಶ್ನಿಸಿದ ಡಿಕೆಶಿ ಜನತೆಗೆ ಬೇಕಾದ್ದನ್ನು ಕಾಂಗ್ರೆಸ್ ಕೊಟ್ಟಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಯನ್ನು ಇಂಪ್ಲಿಮೆಂಟ್ ಮಾಡಲು 4000 ಮಂದಿ ಕಾರ್ಯಕರ್ತರನ್ನು ಸರಕಾರ ನೇಮಕ ಮಾಡಲಿದ್ದು ಎರಡು ದಿನದೊಳಗೆ ಆದೇಶ ಹೊರ ಬೀಳಲಿದೆ ಎಂದು ಹೇಳಿದ ಸಚಿವರು ತಾಲೂಕು ಮಟ್ಟದಲ್ಲೂ ಕಚೇರಿ ಆರಂಭಮಾಡಲಿದೆ. ಪಕ್ಷದ ಕಾರ್ಯಕರ್ತನಾಗಿ ತಳ ಮಟ್ಟದಲ್ಲಿ ಕೆಲಸ ಮಾಡಿದವರಿಗೆ ಗ್ಯಾರಂಟಿ ಯೋಜನೆ ಇಂಪ್ಲಿಮೆಂಟ್ ನಲ್ಲಿ ಸೇವಾ ಕಾರ್ಯಕರ್ತನಾಗಿ ನೇಮಿಸಲಾಗುವುದು ಅವರಿಗೆ ವೇತನವನ್ನೂ ಸರಕಾರ ನೀಡಲಿದೆ ಎಂದು ಹೇಳಿದರು.

ಫೆಬ್ರವರಿ ಮೊದಲ ವಾರದಲ್ಲಿ ಮಂಗಳೂರಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ಎಐಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದ ಪ್ರಮುಖರು‌ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ರಾಜಕೀಯ ಅಂದ್ರೆ ಕೃಷಿ ಇದ್ದಂತೆ
ರಾಜಕೀಯ ಅಂದ್ರೆ ಕೃಷಿ ಇದ್ದ ಹಾಗೆ ಉಳಬೇಕು, ಬಿತ್ತಬೇಕು, ಗೊಬ್ಬರ ಹಾಕಬೇಕು ಕೇವಲ ಕಟೌಟ್ ಹಾಕಿದ ಕೂಡಲೇ ನಾಯಕನಾಗಲು ಸಾಧ್ಯವಿಲ್ಲ. ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ಮಾತ್ರ ಪಕ್ಷ ಬೆಳೆಯಲು ಸಾಧ್ಯ ಎಂಬುದನ್ನು ಪ್ರತೀಯೊಬ್ಬರು ತಿಳಿದುಕೊಂಡು ಕೆಲಸ ಮಾಡಬೇಕು ಎಂದರು.

ಲೋಕಸಭಾ ಚುನಾವಣೆಯಲ್ಲಿ ವೋಟು ಕೇಳಲು ಕೇವಲ ನಾವು ಕೊಟ್ಟ ಐದು ಗ್ಯಾರಂಟಿ ಯೋಜನೆ ಸಾಕು. ಕಾರ್ಯಕರ್ತರು ಇದನ್ನೇ ಮುಂದಿಟ್ಟು ವೋಟು ಕೇಳುವಂತಾಗಬೇಕು ಎಂದು ಹೇಳಿದರು.ಗ್ಯಾರಂಟಿಯನ್ನು ಟೀಕೆ ಮಾಡುತ್ತಿದ್ದ ಪ್ರಧಾನಿ ಮೋದಿಯವರೇ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.

ಮಂಗಳೂರು ಕಾರ್ಯಕ್ರಮ ಯಶಸ್ವಿಯಾಗಬೇಕು: ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸಮಾವೇಶ ಯಶಸ್ವಿಯಾಗಬೇಕು. ಜಿಲ್ಲೆಯಲ್ಲಿ 5 ಬಾರಿ ಲೋಕಸಭಾ ಕ್ಷೇತ್ರವನ್ನು ಸೋತಿದ್ದರೂ ದೃತಿಗೆಡಬೇಡಿ .‌ಚಿಕ್ಕ‌ಗಳೂರು‌ಮತ್ತು ಮಡಿಕೇರಿ ಕ್ಷೇತ್ರದ ಗೆಲುವು ನಮಗೆ ಶಕ್ತಿ ತುಂಬಿದೆ. ಬೇರೆ ಪಕ್ಷದಿಂದ ಕಾರ್ಯಕರ್ತರನ್ನು ನಾಯಕರನ್ನು ಕರೆ ತರಬೇಕು. ಅಲ್ಲಲ್ಲಿ ಪಕ್ಷಕ್ಕೆ ಕಾರ್ಯಕರ್ತರನ್ನು ಸೇರಿಸಿಕೊಳ್ಳಬೇಕು ಎಂದು ಹೇಳಿದರು. ನಾವು ನಾಯಕರೆಂದು ಹೇಳಿಕೊಂಡು ಶೋ ಮಾಡಬಾರದು ತಳಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಗಟ್ಟಿ ಗೊಳಿಸಬೇಕು ಎಂದು ಹೇಳಿದರು.
ಪಕ್ಷಕ್ಕಾಗಿ ಕೆಲಸ ಮಾಡದ ನಾಯಕರಿದ್ದರೆ ಅವರ ಸ್ಥಾನವನ್ನು ಬದಲಾಯಿಸಿ ಎಂದು ಸೂಚಿಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪುತ್ತೂರು ಶಾಸಕರಾದ ಅಶೋಕ್ ರೈ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಪ್ರಮುಖರಾದ ವಿನಯಕುಮಾರ್ ಸೊರಕೆ, ರಮಾನಾಥ ರೈ, ಐವನ್ ಡಿಸೋಜಾ, ಎಂಎಲ್ಸಿ ಮಂಜುನಾಥ್ ಭಂಡಾರಿ ಉಪಸ್ಥಿತಿ

Leave a Reply

Your email address will not be published. Required fields are marked *

error: Content is protected !!