ಶೋಯೆಬ್ ಮಲಿಕ್-ಸಾನಿಯಾ ದಾಂಪತ್ಯ ಅಂತ್ಯ
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ಮದುವೆಯ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಶೋಯೆಬ್ ಜನಪ್ರಿಯ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.
ಈ ಹಿಂದೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗಿದ್ದ ಶೋಯೆಬ್ ಮಲಿಕ್ ಮದುವೆ ಆಗಿದ್ದರು. ಕಳೆದ ಕೆಲವು ಸಮಯದಿಂದ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹರಿದಾಡಿತ್ತು. ಇಬ್ಬರು ಬೇರ್ಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಇವುಗಳ ನಡುವೆ ಶೋಯಬ್ ಮಲಿಕ್ ಅವರ ಮದುವೆಯ ಸುದ್ದಿ ಬೆಳಕಿಗೆ ಬಂದಿದೆ.
ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಅವರ ವಿವಾಹವು 2010 ರಲ್ಲಿ ನಡೆದಿತ್ತು. 2018 ರಲ್ಲಿ ಸಾನಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಕೊರೋನ ನಂತರ, ಇಬ್ಬರ ನಡುವೆ ವೈ ಮನಸ್ಸು ಮೂಡಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಸನಾಗೆ ಎರಡನೇ ಮದುವೆ:
ಶೋಯೆಬ್ ಮಲಿಕ್ ಅವರನ್ನು ವಿವಾಹ ಆಗಿರುವ ಸನಾ ಜಾವೇದ್ ಅವರಿಗೆ ಕೂಡ ಇದು ಎರಡನೇ ಮದುವೆ ಎನ್ನಲಾಗಿದೆ. ಸನಾ ಈ ಹಿಂದೆ ಪಾಕಿಸ್ತಾನಿ ಗಾಯಕ ಉಮರ್ ಜಸ್ವಾಲ್ ಅವರನ್ನು ವಿವಾಹ ಆಗಿದ್ದರು. ಸನಾ ಅವರ ಮೊದಲ ಮದುವೆ 2020 ರಲ್ಲಿ ನಡೆದಿತ್ತು.