ಕರಾವಳಿ

ಸೊರಕೆ: ಬೆಂಕಿ ಅವಘಡ-ಮನೆ ಭಸ್ಮ



ಪುತ್ತೂರು: ಮನೆಯೊಂದು ಬೆಂಕಿಗಾಹುತಿಯಾದ ಘಟನೆ ಪುತ್ತೂರು ತಾಲೂಕು ಸರ್ವೆ ಗ್ರಾಮದ ಸೊರಕೆ ಸಮೀಪ ವರದಿಯಾಗಿದೆ. ಘಟನೆಯಿಂದ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಜ.9ರಂದು ರಾತ್ರಿ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.

ಸೊರಕೆ ಪೆರಂಟೋಲು ನಿವಾಸಿ ಕುಂಡ ಎಂಬವರ ಟರ್ಪಾಲು ಹೊದಿಕೆಯ ಕಚ್ಚಾ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಈ ಮನೆಯಲ್ಲಿ ಕುಂಡ ಹಾಗೂ ಅವರ ಮಗ ಮತ್ತು ಸೊಸೆ ವಾಸಿಸುತ್ತಿದ್ದರು. ಜ.9ರಂದು ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಹೊತ್ತಿಕೊಂಡಿದ್ದು ಮನೆಯೊಳಗಿದ್ದ ಬಟ್ಟೆ ಬರೆ, ಪಾತ್ರೆ, ಮನೆಯ ದಾಖಲೆ ಬೆಂಕಿಗಾಹುತಿಯಾಗಿದೆ.

ಘಟನೆಯಿಂದ 1.5 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಮುಂಡೂರು ಗ್ರಾಮ ಆಡಳಿತಾಧಿಕಾರಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!