ಲೋಕಸಭೆಯಿಂದ ಮತ್ತೆ ಇಬ್ಬರು ಸಂಸದರ ಅಮಾನತು
ಲೋಕಸಭೆಯಲ್ಲಿ ಡಿಸೆಂಬರ್ 13 ರಂದು ನಡೆದ ಭದ್ರತಾ ಲೋಪದ ಕುರಿತು ಚರ್ಚೆ ನಡೆಸಬೇಕೆಂದು ಒತ್ತಾಯಿಸಿ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಮತ್ತೆ ಇಬ್ಬರು ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
49 ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಿದ ಒಂದು ದಿನದ ನಂತರ ಇದೀಗ ಇಬ್ಬರನ್ನು ಅಮಾನತು ಮಾಡಲಾಗಿದೆ. ಉಭಯ ಸದನಗಳಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆ 143ಕ್ಕೇರಿದೆ. ಲೋಕಸಭೆಯಲ್ಲಿ 97 ಮತ್ತು ರಾಜ್ಯಸಭೆಯಲ್ಲಿ 46 ಕ್ಕೆ ಸದಸ್ಯರನ್ನು ಅಮಾನತು ಮಾಡಲಾಗಿದೆ.