ಕೇರಳ ಮುಖ್ಯಮಂತ್ರಿ ವಿರುದ್ದ ಗಂಭೀರ ಆರೋಪ ಮಾಡಿದ ರಾಜ್ಯಪಾಲ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನ್ನ ಮೇಲೆ ದೈಹಿಕ ಹಲ್ಲೆ’ ಎಸಗಲು ಸಂಚು ಹೂಡಿದ್ದಾರೆ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ.
ಹೊಸದಿಲ್ಲಿಗೆ ಪ್ರಯಾಣಿಸುವುದಕ್ಕಾಗಿ ತಿರುವನಂತಪುರ ವಿಮಾನ ನಿಲ್ದಾಣದತ್ತ ರಾಜ್ಯಪಾಲರು ತೆರಳುತ್ತಿದ್ದಾಗ ಎಸ್‌ಎಫ್ಐಯ ಸದಸ್ಯರು ವಾಹನ ತಡೆದು ಕಪ್ಪು ಬಾವುಟ ಪ್ರದರ್ಶಿಸಿದ್ದರು. ಇದಕ್ಕೆ ತೀವ್ರ ಆಕ್ರೋಶಭರಿತರಾಗಿರುವ ರಾಜ್ಯಪಾಲರು ಮುಖ್ಯಮಂತ್ರಿ ಪಿಣರಾಯಿ ಮೇಲೆ ಹಲ್ಲೆ ಯ ಸಂಚಿನ ಆರೋಪ ಮಾಡಿದ್ದಾರೆ. ಕೇರಳದಲ್ಲಿ ಸಾಂವಿಧಾನಿಕ ಯಂತ್ರ ಕುಸಿದಂತೆ ಕಾಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.