ಕಬಕ-ವಿಟ್ಲ ರಸ್ತೆ ದುರಸ್ಥಿಗಾಗ್ರಹಿಸಿ ಪ್ರತಿಭಟನೆ: ಕಾಂಗ್ರೆಸ್ ಮುಖಂಡರ ಭಿನ್ನ ಹೇಳಿಕೆ
ಪುತ್ತೂರು: ಸಂಪೂರ್ಣ ಹದಗೆಟ್ಟ ಕಬಕ-ವಿಟ್ಲ ರಸ್ತೆಯ ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನೆಯ ಬಗ್ಗೆ ಕಾಂಗ್ರೆಸ್ ನ ನಾಯಕರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ಪ್ರತಿಭಟನೆ ಇದೆ: ರಾಜಾರಾಂ ಕೆ ಬಿ
ಪುತ್ತೂರು; ಕಬಕ-ವಿಟ್ಲ ರಸ್ತೆಯ ದುರಸ್ಥಿಗಾಗ್ರಹಿಸಿ ಇಂದು (ಅ.18) ಸಂಜೆ ಕಬಕ ಜಂಕ್ಷನ್‌ನಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ತಿಳಿಸಿದ್ದಾರೆ.
ಪ್ರತಿಭಟನೆ ದಿನ ಮೊದಲೇ ನಿಗಧಿಯಾಗಿರುತ್ತದೆ, ಅದೇ ಪ್ರಕಾರ ಪ್ರತಿಭಟನೆ ನಡೆಯಲಿದೆ. ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಮಾಹಿತಿ ಅರಿತ ಶಾಸಕರು ಅನುದಾನ ಬಿಡುಗಡೆಗೊಳಿಸಿ ರಸ್ತೆ ದುರಸ್ಥಿ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ. ಬಿಜೆಪಿ ಶಾಸಕರ, ಸಚಿವರ ಆಶ್ವಾಸನೆ ನಂಬಲು ಸಾಧ್ಯವಿಲ್ಲ. ಅವರು ಸುಳ್ಳು ಹೇಳುವುದೇ ಜಾಸ್ತಿ. ಅವರ ಮಾತು ಸುಳ್ಳಾದರೆ ನಮ್ಮ ರಸ್ತೆಯ ಹೋರಾಟಕ್ಕೂ ಹಿನ್ನಡೆಯಾಗಬಹುದು. 15 ದಿನದೊಳಗೆ ರಸ್ತೆಯನ್ನು ದುರಸ್ಥಿ ಮಾಡಿದರೆ ನಾವು ಶಾಸಕರನ್ನು ಅಭಿನಂದಿಸುವುದಾಗಿ ಹೇಳಿದರು. ಕಬಕ ವಲಯ ಕಾಂಗ್ರೆಸ್ ಪ್ರತಿಭಟನೆಯ ನೇತೃತ್ವ ವಹಿಸಲಿದೆ ಎಂದು ಅವರು ಹೇಳಿದರು. ಪ್ರತಿಭಟನೆ ರದ್ದಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದಮ ಅವರು ಆ ವಿಚಾರ ನನಗೆ ಗೊತ್ತಿಲ್ಲ. ಪೂರ್ವ ನಿಗಧಿಯಂತೆ ಪ್ರತಿಭಟನೆ ಸಂಜೆ ನಡೆಯಲಿದೆ ಎಂದು ಹೇಳಿದರು.
ಪ್ರತಿಭಟನೆ ಮಾಡುವುದಿಲ್ಲ: ಹೇಮನಾಥ ಶೆಟ್ಟಿ
ವಿಟ್ಲ ಕಬಕ ರಸ್ತೆ ದುರಸ್ಥಿಗಾಗ್ರಹಿಸಿ ಕಬಕದಲ್ಲಿ ನಡೆಯಬೇಕಿದ್ದ ಪ್ರತಿಭಟನೆ ಶಾಸಕರ ಆಶ್ವಾಸನೆ ಬಳಿಕ ರದ್ದುಗೊಂಡಿದೆ. ರೂ. 18 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ದುರಸ್ಥಿ ಮಾಡಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಒಂದು ತಿಂಗಳುಗಳ ಕಾಲ ಅವಕಾಶವಿದೆ. ತಿಂಗಳ ಬಳಿಕ ರಸ್ತೆ ದುರಸ್ಥಿಯಾಗದೇ ಇದ್ದರೆ ಮತ್ತೆ ಪ್ರತಿಭಟನೆ ನಡೆಸಲಿದ್ದೇವೆ. ನಾವು ಅಭಿವೃದ್ದಿಯಲ್ಲಿ ರಾಜಕೀಯ ಮಾಡುವುದಿಲ್ಲ. ಪ್ರತಿಭಟನೆಯು ಸಾರ್ವಜನಿಕರ ಪರವಾಗಿ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲವೇ ಇಲ್ಲ. ಶಾಸಕರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಪ್ರತಿಭಟನೆ ನಡೆಯಲಿದೆ ಎಂಬ ಮಾಹಿತಿ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.