ಟ್ರಕ್’ಗೆ ಡಿಕ್ಕಿ: ಹೊತ್ತಿ ಉರಿದ ಕಾರು- 8 ಮಂದಿ ಸಾವು
ತಡರಾತ್ರಿ ಹೆದ್ದಾರಿಯಲ್ಲಿ ಟ್ರಕ್ ಗೆ ಕಾರು ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಮಗು ಸೇರಿದಂತೆ ಎಂಟು ಪ್ರಯಾಣಿಕರು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹೆದ್ದಾರಿಯಲ್ಲಿ ಅಪಘಾತದ ನಂತರ ಕಾರಿನ ಬಾಗಿಲುಗಳು ಸೆಂಟರ್ ಲಾಕ್ ಆಗಿದ್ದು ತೆರೆಯಲು ಸಾಧ್ಯವಾಗದೆ ಅದರೊಳಗಿದ್ದವರು ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.