ಭಕ್ತಕೋಡಿ: ಯುವಕ ನಿಧನ
ಪುತ್ತೂರು: ಭಕ್ತಕೋಡಿ ಸಮೀಪದ ಪಾಲೆತ್ತಗುರಿ ನಿವಾಸಿ ಆಟೋ ರಿಕ್ಷಾ ಚಾಲಕ ವಿನೋದ್ (23.ವ) ಅವರು ಡಿ.5ರಂದು ನಿಧನರಾಗಿದ್ದಾರೆ.
ಭಕ್ತಕೋಡಿಯಲ್ಲಿ ರಿಕ್ಷಾ ಬಾಡಿಗೆ ಮಾಡುತ್ತಿದ್ದ ವಿನೋದ್ ಅವರಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು ಅದಕ್ಕೆ ಸ್ಥಳೀಯವಾಗಿ ಕ್ಲಿನಿಕ್ ನಿಂದ ಔಷಧಿ ಪಡೆದುಕೊಂಡಿದ್ದರು.
ಡಿ.4ರಂದು ರಾತ್ರಿ ವಿನೋದ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಡಿ.5ರಂದು ಬೆಳಿಗ್ಗೆ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.
ಮೃತರು ತಂದೆ ಕುಂಞ, ತಾಯಿ ಶೀಲಾ, ಸಹೋದರ ಪುನೀತ್, ಸಹೋದರಿ ಜಯಶ್ರೀ ಅವರನ್ನು ಅಗಲಿದ್ದಾರೆ.
ಮೃತರ ಮನೆಗೆ ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಸರ್ವೆದೋಳಗುತ್ತು, ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ, ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ಎಸ್.ಎಂ ಶರೀಫ್ ಸರ್ವೆ ಮತ್ತಿತರ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.