ಕರಾವಳಿ

ಸುಳ್ಯ: ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾಟ ಆಯೋಜಕರಿಗೆ ಸನ್ಮಾನ: ಕ್ಯಾಪ್ಟನ್ ಪ್ರಾಂಜಲ್ ರಿಗೆ ಶ್ರದ್ಧಾಂಜಲಿಇತ್ತೀಚೆಗೆ ಸುಳ್ಯದಲ್ಲಿ ನಡೆದ ರಾಷ್ಟ್ರೀಯ ಕಬಡ್ಡಿ ಪಂದ್ಯಾಕೂಟದ ಆಯೋಜಕರಾದ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಇದರ ಸಮಿತಿ ಹಾಗೂ ಸಂಘಟನಾ ಸಮಿತಿ ಸದಸ್ಯರನ್ನು ಎಂಬಿ ಫೌಂಡೇಶನ್ ವತಿಯಿಂದ ಸುಳ್ಯ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ನವಂಬರ್ 30ರಂದು ಅಭಿನಂದಿಸಿ ಗೌರವಿಸಲಾಯಿತು.

ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವರವರು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದವರನ್ನು ಯಶಸ್ವಿ ಕ್ರೀಡಾಕೂಟ ಆಯೋಜಕರನ್ನು ಗೌರವಿಸಿ ಶುಭ ಹಾರೈಸಿದರು.
ಧ್ವನಿ ಬೆಳಕು ಮತ್ತು ಶಾಮಿಯಾನ ಸಂಘದ ಗೌರವ ಸಲಹೆಗಾರರಾದ ಜಿ ಜಿ ನಾಯಕ್ ಸಂಘದ ಪರವಾಗಿ ಮಾತನಾಡಿ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ರವರಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್, ರಾಷ್ಟ್ರೀಯ ಕಬ್ಬಡಿ ಪಂದ್ಯಾಟ ಸಂಘಟನಾ ಸಮಿತಿ ಅಧ್ಯಕ್ಷ ಜಿ.ಪಿ ಸಂಶುದ್ದೀನ್, ಸಂಘದ ಸಲಹೆಗಾರರಾದ ಜಿ ಜಿ ನಾಯಕ್,ಸಂಘಟನಾ ಸಮಿತಿ ಉಪಾಧ್ಯಕ್ಷ ಶಾಫಿ ಪ್ರಗತಿ,ಸಂಘದ ಕೋಶಾಧಿಕಾರಿ ಜಿ.ಎ ಮಹಮ್ಮದ್,ಸಂಘಟನಾ ಸಮಿತಿ ಕೋಶಾಧಿಕಾರಿ ಅಬ್ದುಲ್‌ ರಜಾಕ್ ಸ್ವಾಗತ್,ಸಮಿತಿ ಸದಸ್ಯ ಶ್ರೀಧರ ಸ್ವಾಮಿ ಸೌಂಡ್ಸ್, ಮೊದಲಾದವರು ಉಪಸ್ಥಿತರಿದ್ದರು.
ಎಂ ಬಿ ಫೌಂಡೇಶನ್ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ಸಂಯೋಜಕರಾಗಿ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!