ಪುತ್ರಿಯರು ವಾಸವಿದ್ದ ಬಾಡಿಗೆ ಮನೆಗೆ ಭೇಟಿ ನೀಡಿ ಕಣ್ಣೀರಿಟ್ಟ ನೂರ್ ಮುಹಮ್ಮದ್
ಉಡುಪಿ: ನೇಜಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯ್ನಾಝ್, ಆರೋಪಿಯ ಸ್ಕೂಟರ್ ಬಳಸುತ್ತಿದ್ದ ಬಗ್ಗೆ ಆಯ್ನಾಝ್ ತಂದೆ ನೂರ್ ಮುಹಮ್ಮದ್ ಸ್ಪಷ್ಟನೆ ನೀಡಿದ್ದು 28 ಸಾವಿರ ರೂ.ಹಣ ಕೊಟ್ಟು ಸ್ಕೂಟರ್ ಖರೀದಿಸಲಾಗಿತ್ತು ಎಂದು ಹೇಳಿದ್ದಾರೆ.

ಆರೋಪಿ ಪ್ರವೀಣ್ ಚೌಗಲೆ, ಅಯ್ನಾಝ್ಳ ಸಿನೀಯರ್ ಆಗಿದ್ದು, ಬಾಡಿಗೆ ಅಪಾರ್ಟ್‌ಮೆಂಟ್ ಹುಡುಕಲು ಸಹಾಯ ಮಾಡಿದ್ದ. ನಾನು ಕಳುಹಿಸಿದ ಹಣದಲ್ಲಿ ಅಡ್ವಾನ್ಸ್ ಕೊಟ್ಟು ಅಪಾರ್ಟ್ ಮೆಂಟ್ ಬಾಡಿಗೆಗೆ ಪಡೆಯಲಾಗಿತ್ತು. ಆತನ ಹಳೆಯ ಸ್ಕೂಟರನ್ನು ಹಣ ಕೊಟ್ಟು ಖರೀದಿಸಿದ್ದೇವೆ. ನಮ್ಮ ಹೆಸರಿಗೆ ನೋಂದಣಿ ಮಾಡಿಕೊಳ್ಳಲು ತಡವಾಗಿತ್ತು ಅಷ್ಟೇ. ಹಾಗಾಗಿ ಆತನ ಹೆಸರಿನಲ್ಲೇ ಸ್ಕೂಟರ್ ಇತ್ತು. ಅದನ್ನು ನನ್ನ ಪುತ್ರಿಯರು ಸ್ಥಳೀಯವಾಗಿ ಸಂಚರಿಸಲು ಬಳಸುತ್ತಿದ್ದರು ಎಂದು ನೂರ್ ಮುಹಮ್ಮದ್ ಹೇಳಿದ್ದಾರೆ.
ಅಯ್ನಾಝ್ ಮತ್ತು ಅಫ್ನಾನ್ ವಾಸವಿದ್ದ ಬಾಡಿಗೆ ಮನೆಗೆ ಭೇಟಿ ನೀಡಿದ ನೂರ್ ಮುಹಮ್ಮದ್, ಅಲ್ಲಿ ನಮಾಝ್ ಮಾಡುತ್ತಿದ್ದ ಮುಸಲ್ಲಾ, ಕುರಾನ್ ನೋಡಿದ್ದಾರೆ. ಅಲ್ಲಿ ಆಯ್ನಾಜ್ ಡೈರಿ ಸಿಕ್ಕಿದ್ದು ಅದರಲ್ಲಿ ಆಕೆ ಪ್ರತೀ ದಿನದ ದಿನಚರಿಯನ್ನು ಬರೆದು ಇಡುತ್ತಿದ್ದಳು. ಕೊನೆಯ ನಮಾಝ್ ಮಾಡಿದ ಕುರುಹು ಕೂಡ ಆ ಮನೆಯಲ್ಲಿ ನೋಡಿದೆ ಎಂದು ನೂರ್ ಮುಹಮ್ಮದ್ ಕಣ್ಣೀರಿಡುತ್ತಾ ನೋವು ಹಂಚಿಕೊಂಡಿದ್ದಾರೆ.