ಕಣ್ಣಾಮುಚ್ಚಾಲೆ ಆಡುತ್ತಿದ್ದ ಬಾಲಕಿಯರಿಬ್ಬರನ್ನು ಬಲಿ ಪಡೆದ ಫ್ರಿಡ್ಜ್
ಕಣ್ಣಾಮುಚ್ಚಾಲೆ ಆಡುತ್ತಿದ್ದ ಸೋದರಿ ಬಾಲಕಿಯರಿಬ್ಬರು ಮನೆಯಲ್ಲಿ ಬಳಕೆಯಾಗದೆ ಮೂಲೆಯಲ್ಲಿ ಬಿದ್ದಿದ್ದ ಫ್ರಿಡ್ಜ್ ನಲ್ಲಿ ಅಡಗಿ ಕುಳಿತ ಪರಿಣಾಮ ಇಬ್ಬರು ಬಾಲಕಿಯರು ದಾರುಣ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಪುಟ್ಟ ಬಾಲಕಿಯರು ಫ್ರಿಡ್ಜ್ ಒಳಗಡೆ ಹೋಗಿ ಅಡಗಿಕೊಳ್ಳುತ್ತಿದ್ದಂತೆ ಹೊರಗಿನಿಂದ ಫ್ರಿಡ್ಜ್ ನ ಬಾಗಿಲು ಲಾಕ್ ಆಗಿದೆ. ಪರಿಣಾಮ ಬಾಲಕಿರಿಬ್ಬರು ಮೃತಪಟ್ಟಿದ್ದಾರೆ.
ಆಟವಾಡುತ್ತಿದ್ದ ಮಕ್ಕಳು ಕಾಣದಿರುವಾಗ ಮನೆಯವರು ಹುಡುಕಾಟ ನಡೆಸಿದ್ದು ಎಷ್ಟೇ ಹುಡುಕಾಡಿದರೂ ಮಕ್ಕಳು ಪತ್ತೆಯಾಗದ ಕಾರಣ ಮನೆಯವರು ಆತಂಕಗೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಹಳೆಯ ಫ್ರೀಜರ್ ನಲ್ಲಿ ಪುಟ್ಟ ಬಾಲಕಿಯರಿಬ್ಬರ ಮೃತದೇಹ ಪತ್ತೆಯಾಗಿದೆ. ಬಳಿಕ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. 10 ಮತ್ತು 11 ವರ್ಷದ ಬಾಲಕಿಯರಾಗಿದ್ದಾರೆ.