ಅಂತಾರಾಷ್ಟ್ರೀಯಕ್ರೈಂ

ಗಾಝಾದಲ್ಲಿ ಶಾಲೆ, ಕಟ್ಟಡದ ಮೇಲೆ ಇಸ್ರೇಲ್ ದಾಳಿ; 80ಕ್ಕೂ ಅಧಿಕ ಮಂದಿ ಮೃತ್ಯುಗಾಝಾ ಪಟ್ಟಿಯಲ್ಲಿ ಶಿಬಿರವೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಗಳಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಗಾಝಾದ ಒಂದು ಚಿತ್ರ

ವಿಶ್ವಸಂಸ್ಥೆ ನಡೆಸುವ ಅಲ್-ಫಕೂರಾ ಶಾಲೆ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ. ಈ ಶಾಲೆಯನ್ನು ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯನ್ನರ ತಾತ್ಕಾಲಿಕ ಶಿಬಿರವನ್ನಾಗಿ ಪರಿವರ್ತಿಸಲಾಗಿತ್ತು ಎಂದು ತಿಳಿದು ಬಂದಿದೆ.

ಇನ್ನೊಂದು ಕಟ್ಟಡದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಒಂದೇ ಕುಟುಂಬದ 30 ಮಂದಿ ಸಾವನ್ನಪ್ಪಿದ್ದು ಅದರಲ್ಲಿ ಹೆಚ್ಚಿನ ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!