ಕರಾವಳಿ

ಸ್ಟಾರ್ಟ್ ಬಂದ್ ಆಗಿ ರಸ್ತೆ ಮಧ್ಯೆ ಬಾಕಿಯಾದ ನಟ ಸುಂದರ ರೈ ಮಂದಾರರ ಕಾರು…! ಕಾರು ಸ್ಟಾರ್ಟ್ ಆದದ್ದು ಹೇಗೆ..



ನಟ ಸುಂದರ ರೈ ಮಂದಾರ ಅವರು ಚಲಾಯಿಸುತ್ತಿದ್ದ ಕಾರು ರಸ್ತೆ ನಡುವೆ ಕೆಟ್ಟು ನಿಂತಿದ್ದ ವೇಳೆ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಸ್ವತಃ ಸುಂದರ ರೈ ಮಂದಾರ ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು ನನಗೆ ನಂಬಲು ಸಾಧ್ಯವಾಗದ ಘಟನೆಯೊಂದು ನಡೆದಿದೆ. ಇದು ನಂಬಲಸಾಧ್ಯವಾದರೂ ನಂಬಲೇಬೇಕಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದು ಬೇರೆಲ್ಲೋ ನಡೆದ ಘಟನೆಯಲ್ಲ, ಪುತ್ತೂರಿನಲ್ಲೇ ನಡೆದ ಪವಾಡ ರೀತಿಯ ವಿಸ್ಮಯ. ಇಷ್ಟಕ್ಕೂ ರಂಗಭೂಮಿ ಕಲಾವಿದ ಸುಂದರ ರೈ ಮಂದಾರರನ್ನು ಅಚ್ಚರಿ ಮೂಡಿಸಿದ ಆ ಘಟನೆ ಯಾವುದೆಂದು ಕುತೂಹಲ ಇದೆಯಾ..? ಅವರು ಚಲಾಯಿಸಿಕೊಂಡು ಬಂದ ಕಾರು ರಸ್ತೆ ಮಧ್ಯೆಯೇ ಸ್ಟ್ರಾಟ್ ಬಂದ್ ಆದಾಗ ಅವರು ಮಾಡಿದ್ದೇನು..? ಸ್ಟ್ರಾಟ್ ಆಗದ ಕಾರು ಏಕಾಏಕಿ ಸ್ಟಾರ್ಟ್ ಆದದ್ದು ಹೇಗೆ…? ಅಷ್ಟಕ್ಕೂ ಅಲ್ಲಿಗೆ ಬಂದ ಆ ವಯೋವೃದ್ಧ ವ್ಯಕ್ತಿ ಯಾರು..? ಅವರು ಸ್ಟೇರಿಂಗ್ ಮೇಲೆ ಕೈ ಇಟ್ಟಂತೆ ಕಾರು ಸ್ಟ್ರಾಟ್ ಆಗಿದ್ದು ಹೇಗೆ..? ಈ ಘಟನೆಯೇ ಒಂದು ರೋಚಕ ಕಥೆಯಂತಿದೆ.

ತುಳು ರಂಗ ಭೂಮಿಯಲ್ಲಿ ಸದ್ದು ಮಾಡುತ್ತಿರುವ ರಂಗ್‌ದ ರಾಜೆ ಖ್ಯಾತಿಯ ಕಲಾವಿದ ಸುಂದರ ರೈ ಮಂದಾರರವರು ತನ್ನ ಪತ್ನಿಯೊಂದಿಗೆ ನ.11ರಂದು ದೀಪಾವಳಿ ಖರೀದಿಗಾಗಿ ಪುತ್ತೂರು ರಾಧಾಸ್ ಡ್ರೆಸ್ ಶಾಫ್‌ಗೆ ತೆರಳಿದ್ದರು. ಕೋರ್ಟ್ ರಸ್ತೆಯ ಮೂಲಕ ಮಂದಾರರು ರಾಧಾಸ್‌ಗೆ ತನ್ನ ಕಾರಲ್ಲಿ ಬಂದಾಗ ಮಧ್ಯಾಹ್ನದ ಸಮಯ, ಅಲ್ಲಿ ಪಾರ್ಕಿಂಗ್‌ಗೆ ಜಾಗವಿರಲಿಲ್ಲ, ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಲು ನೋಡಿದಾಗ ಅಲ್ಲೇ ಇದ್ದ ವಾಚ್‌ಮೆನ್ ಬಂದು ನೀವು ಇಲ್ಲಿ ಕಾರು ಪಾರ್ಕ್ ಮಾಡಬೇಡಿ ಪೊಲೀಸ್ ಫೈನ್ ಹಾಕ್ತಾರೆ, ಅಲ್ಲಿ ಪಾರ್ಕಿಂಗ್ ಏರಿಯಾದಲ್ಲಿ ಪಾರ್ಕ್ ಮಾಡಿ ಎಂದರಂತೆ. ಸುಂದರ ರೈ ಮಂದಾರರವರು ರಾಧಾಸ್‌ನ ಅಂಡರ್ ಗ್ರೌಂಡ್‌ನಲ್ಲಿರುವ ಪಾರ್ಕಿಂಗ್‌ಗೆ ತನ್ನ ಕಾರನ್ನು ಪಾರ್ಕ್ ಮಾಡಲು ಮುಖ್ಯ ರಸ್ತೆಯಿಂದ ತಿರುಗಿಸಿ ಮುಂದೆ ಚಲಿಸುತ್ತಿದ್ದಂತೆ ಕಾರು ಏಕಾಏಕಿ ಸ್ಟ್ರಾಟ್ ಬಂದ್ ಆಯಿತು. ನಂತರ ನಡೆದದ್ದೇ ವಿಸ್ಮಯ.

ಕಾರು ಸ್ಟಾರ್ಟ್ ಬಂದ್ ಆದಾಗ ಮಂದಾರರು ಸಹಜವಾಗಿ ಅನೇಕ ಬಾರಿ ಸ್ಟ್ರಾಟ್ ಮಾಡಲು ನೋಡಿದ್ದಾರೆ. ಏನೇ ಮಾಡಿದರೂ ಕಾರು ಸ್ಟ್ರಾಟ್ ಆಗಲೇ ಇಲ್ಲ…ಒಂದಲ್ಲ ಎರಡಲ್ಲ ಹತ್ತಾರು ಬಾರಿ ಟ್ರೈ ಮಾಡಿದರೂ ಕಾರು ಮಾತ್ರ ಸ್ಟ್ರಾಟ್ ಆಗಲೇ ಇಲ್ಲ. ಮಂದಾರರಿಗೆ ಬೆವರಲು ಶುರುವಾಯಿತು. ರಸ್ತೆ ಮಧ್ಯೆ ಕಾರು ಬಾಕಿಯಾಗಿದ್ದರಿಂದ ಎದುರಿನಿಂದ ಹಿಂದಿನಿಂದ ವಾಹನದ ಹಾರ್ನ್ ಕೇಳಲು ಶುರುವಾಯಿತು. ಕಾರಿನಿಂದ ಕೆಳಗಿಳಿದ ಸುಂದರ ರೈಯವರು ಕಾರಿನ ಬೊನೆಟ್ ಓಪನ್ ಮಾಡಿ ಒಂದ್ಸಲ ಚೆಕ್ ಮಾಡಿದರು. ಆಯಿಲ್ ಇದೆಯಾ ಎಂದು ನೋಡಿದರೆ ಅದು ಇದೆ, ನೀರು ಖಾಯಿಯಾಗಿಲ್ಲ ಅವರಿಗೆ ತಿಳಿದಂತೆ ಎಲ್ಲವೂ ಸರಿಯಾಗಿಯೇ ಇತ್ತು. ಏಕೆಂದರೆ ಮಂದಾರರೇ ಹೇಳುವಂತೆ ಕಳೆದ 15 ವರ್ಷಗಳಿಂದ ಕಾರು ಓಡಿಸುತ್ತಿದ್ದಾರೆ. ಆದ್ದರಿಂದ ಕಾರಿನ ಕೆಲವು ವಿಷಯಗಳು ನನಗೆ ತಿಳಿದಿದೆ ಎನ್ನುತ್ತಾರೆ. ಹೇಗೆ ಚೆಕ್ ಮಾಡಿದರು ಕಾರು ಚಾಲೂ ಆಗಲೇ ಇಲ್ಲ. ಇನ್ನೇನು ಮಾಡುವುದು ಎಂದು ಯೋಚಿಸಿ ಕಾರು ದುರಸ್ತಿಯ ಕಾರ್‌ಟೆಕ್‌ಗೆ ಕಾಲ್ ಮಾಡುವ ಎಂದು ಮೊಬೈಲ್ ತೆಗೆದು ನಂಬರ್ ನೋಡುತ್ತಿದ್ದಾಗಲೇ ಅಲ್ಲಿಗೊಬ್ಬರು ವಯೋ ವೃದ್ಧರು ನಡೆದುಕೊಂಡು ಬಂದಿದ್ದರು.

ಮಂದಾರರೇ ಹೇಳುವಂತೆ ಗಡ್ಡಬಿಟ್ಟಿದ್ದ ಆ ವಯೋ ವೃದ್ಧರು ಕಾರಿನ ಹತ್ತಿರ ಬಂದು ಏನಾಯಿತು ಎಂದು ಮಂದಾರರಲ್ಲಿ ಕೇಳಿದರು. ನಾನು ಕಾರು ಸ್ಟ್ರಾಟ್ ಆಗುತ್ತಿಲ್ಲ ಅದಕ್ಕೆ ಕಾರು ಮೆಕ್ಯಾನಿಕ್‌ಗೆ ಕಾಲ್ ಮಾಡುತ್ತಿದ್ದೇನೆ ಎಂದರಂತೆ. ಅದಕ್ಕೆ ಅವರು ಕಾಲ್ ಮಾಡಬೇಡಿ, ಈಗ ಕಾರು ಸ್ಟ್ರಾಟ್ ಆಗುತ್ತದೆ ನೋಡಿ ಎಂದರು. ನಾನು ಇಲ್ಲ ಸ್ಟ್ರಾಟ್ ಆಗುತ್ತಿಲ್ಲ ಸುಮಾರು ಹೊತ್ತಿನಿಂದ ತುಂಬಾ ಪ್ರಯತ್ನ ಪಟ್ಟೆ, ಸುಮ್ಮನೆ ಯಾಕೆ ಸ್ಟಾರ್ಟ್ ಮಾಡಿ ನೋಡಲಿ ಎಂದಾಗ, ಇಲ್ಲ ಈಗ ಸ್ಟ್ರಾಟ್ ಆಗುತ್ತದೆ ಎಂದ ವಯೋವೃದ್ಧ ಸ್ಟೇರಿಂಗ್ ಮೇಲೆ ಕೈ ಇಟ್ಟು ನಮಸ್ಕಾರ ಮಾಡಿ ಈಗ ಸ್ಟ್ರಾಟ್ ಮಾಡಿ ಎಂದರು. ಮಂದಾರರು ಕಾರು ಸ್ಟಾರ್ಟ್ ಮಾಡಿದಾಗ ಕೂಡಲೇ ಕಾರು ಸ್ಟ್ರಾಟ್ ಆಯಿತು. ಇದು ಮಂದಾರರಿಗೆ ಮಾತ್ರವಲ್ಲ, ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವಾಯಿತು. ಮಂದಾರರ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಅವರ ಹೆಂಡತಿ ಅದ್ಹೇಗೆ ನೀವು ಹೇಳಿದ ತಕ್ಷಣ ಕಾರು ಸ್ಟ್ರಾಟ್ ಆಯಿತು ಎಂದು ಆ ವ್ಯಕ್ತಿಯಲ್ಲಿ ಕೇಳಿದಾಗ ಅದೆಲ್ಲಾ ದೇವರ ಮಹಿಮೆ, ನೀವು ಅಲ್ಲಿ ಹೋಗಿ ಕಾರ್ ಪಾರ್ಕ್ ಮಾಡಿ ಎಂದರು. ಈ ಬಗ್ಗೆ ಸುಂದರ ರೈ ಮಂದಾರ ಎಲ್ಲವನ್ನೂ ಹೇಳಿಕೊಂಡಿದ್ದಾರೆ.

ನಾನು ಪಾರ್ಕಿಂಗ್ ಜಾಗದಲ್ಲಿ ಕಾರು ಪಾರ್ಕ್ ಮಾಡಿ, ಡ್ರೆಸ್ ಪರ್ಚೆಸ್ ಮಾಡಿ ಅಲ್ಲಿಂದ ಹಿಂತಿರುಗಿ ಬಂದು ಕಾರು ಪಾರ್ಕಿಂಗ್ ಜಾಗಕ್ಕೆ ಬಂದಾಗ ಆ ವಯೋವೃದ್ಧ ವ್ಯಕ್ತಿ ಅಲ್ಲೆಲ್ಲೂ ಕಾಣಲೇ ಇಲ್ಲ. ಹುಡುಕಾಡಿದರೂ ಅವರು ಸಿಗಲೇ ಇಲ್ಲ ಎನ್ನುತ್ತಾರೆ ಸುಂದರ ರೈ ಮಂದಾರ. ಇಷ್ಟಕ್ಕೂ ಮಂದಾರರಿಗೆ ಕಾಣಸಿಕ್ಕ ಆ ವಯೋವೃದ್ಧ ವ್ಯಕ್ತಿ ಯಾರು..? ವಾಚ್‌ಮೆನ್ ರೀತಿಯಲ್ಲೇ ಕಂಡ ಅವರು ಕಾರಿನ ಬಳಿ ಬಂದು ಮಾಡಿದ ಪವಾಡ ನಿಜಕ್ಕೂ ಅಚ್ಚರಿ ಮೂಡಿಸಿದೆ. ಮಂದಾರರೇ ಹೇಳುವಂತೆ ದೇವರಿದ್ದಾನೆ ಎನ್ನುವುದನ್ನು ನಾನು ಬಲವಾಗಿ ನಂಬಿದವನು, ಬಹುಷಹ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರೇ ಆ ವ್ಯಕ್ತಿಯ ರೂಪದಲ್ಲಿ ಬಂದ ನನಗೆ ಸಹಾಯ ಮಾಡಿರಬಹುದು ಎನ್ನುತ್ತಾರೆ.

Leave a Reply

Your email address will not be published. Required fields are marked *

error: Content is protected !!