ಕೊರಳಲ್ಲಿ ಹುಲಿ ಉಗುರು ಮಾದರಿಯ ಪೆಡೆಂಟ್: ಸುಳ್ಯ ನಗರ ಪಂಚಾಯತ್ ಸಿಬ್ಬಂದಿ ಚಿತ್ರ ಜಾಲತಾಣಗಳಲ್ಲಿ ವೈರಲ್ !
ಬಿಗ್ ಬಾಸ್ ಸ್ಪರ್ಧಿಯ ಬಂಧನ ರಾಜ್ಯಾದ್ಯಂತ ಸುದ್ದಿಯಾಗುತ್ತಿರುವ ಬೆನ್ನಲ್ಲೆ ಇದೀಗ ಕೆಲ ಸಿನಿಮಾ ಮತ್ತು ರಾಜಕೀಯ ನಾಯಕರುಗಳ ಕೊರಳಲ್ಲಿ ಹುಲಿ ಉಗುರು ಮಾದರಿಯ ಪೆಡೆಂಟ್ ಗಳು ಪತ್ತೆಯಾಗಿ ಪ್ರಕರಣ ದಾಖಲಾಗಿದ್ದು ಎಲ್ಲರೂ ಬಂಧನ ಭೀತಿ ಎದುರಿಸುತ್ತಿದ್ದಾರೆ.
ಇದೀಗ ಸುಳ್ಯ ನಗರ ಪಂಚಾಯತ್ ಸಿಬ್ಬಂದಿ ಶಶಿಕಲಾ ರವರ ಕೊರಳಲ್ಲಿ ಪೆಂಡೆಂಟ್ ಹಾಕಿರುವ ಫೋಟೋ ವೈರಲ್ ಆಗುತ್ತಿದ್ದು, ಇದು ಅಸಲಿಯೋ ನಕಲಿಯೋ ಗೊತ್ತಿಲ್ಲ. ಈ ಬಗ್ಗೆ ಅರಣ್ಯಾಧಿಕಾರಿಗಳು ಜನರಿಗೆ ಸತ್ಯಾಸತ್ಯತೆಯ ಮಾಹಿತಿ ನೀಡಬೇಕಾಗಿದೆ ಎನ್ನುವ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ನಗರ ಪಂಚಾಯತಿ ಸಿಬ್ಬಂದಿ ಶಶಿಕಲಾ ರವರ ಬಳಿ ಹುಲಿಯ ಉಗುರು ಫೋಟೋ ವೈರಲ್ ಆದ ಘಟನೆಗೆ ಸಂಬಂಧಿಸಿ ಶಶಿಕಲ ರವರು ತಮ್ಮ ಬಳಿ ಇದ್ದ ಪೆಂಡೆಂಟನ್ನು ಇದೀಗ ಸುಳ್ಯ ಅರಣ್ಯ ಇಲಾಖೆಯ ಕಚೇರಿಗೆ ಒಪ್ಪಿಸಿರುತ್ತಾರೆ ಎಂದು ತಿಳಿದುಬಂದಿದೆ.
ಈ ವಿಷಯದ ಕುರಿತು ಅರಣ್ಯ ಅಧಿಕಾರಿಗಳು ಶಶಿಕಲಾ ರವರಿಂದ ಮಾಹಿತಿ ಪಡೆದುಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.