ಎಸ್.ಡಿ.ಪಿ.ಐ ಉಪ್ಪಿನಂಗಡಿ ಮತ್ತು ಇಳಂತಿಳ ಬ್ಲಾಕ್ ಸಮಿತಿ ವತಿಯಿಂದ ಪಕ್ಷದ ಸಮಾವೇಶ
ಉಪ್ಪಿನಂಗಡಿ: ಎಸ್.ಡಿ.ಪಿ.ಐ ಉಪ್ಪಿನಂಗಡಿ ಬ್ಲಾಕ್ ಮತ್ತು ಇಳಂತಿಳ ಜಂಟಿ ಸಮಿತಿಗಳ ವತಿಯಿಂದ ಕಾರ್ಯಕರ್ತರೊಂದಿಗೆ ಪಕ್ಷದ ಸಮಾವೇಶವು ಎಚ್.ಎಂ ಆಡಿಟೋರಿಯಂ ನಲ್ಲಿ ನಡೆಯಿತು.
ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಆಗಮಿಸಿ ಪಕ್ಷದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ವಿಚಾರಗಳ ವಿನಿಮಯ ಮಾಡಿದರು.ಪಕ್ಷವು ಹಲವಾರು ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸಿದರೂ ಕೂಡ ಇಷ್ಟು ಬಲಿಷ್ಟ ವಾಗಿರಲು ಕಾರಣ ನಾಯಕರುಗಳ ಮತ್ತು ಬೂತ್ ಮಟ್ಟದ ಕ್ಯಾಡರ್ ಗಳ ತ್ಯಾಗ ಬಲಿದಾನವಾಗಿದೆ ಎಂದರು.
ಎಸ್.ಡಿ.ಪಿ.ಐ ದ.ಕ ಜಿಲ್ಲಾ ಅಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಸಾಂದರ್ಭಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಹಮೀದ್ ಸಾಲ್ಮರ, ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಉಸ್ಮಾನ್ ಎಕೆ,ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಸದಸ್ಯರಾದ ಅಡ್ವೊಕೇಟ್ ಅಬ್ದುಲ್ ರಹಿಮಾನ್,ಎಸ್.ಡಿ.ಪಿ.ಐ ಉಪ್ಪಿನಂಗಡಿ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಮುಸ್ತಫಾ ಲತೀಫಿ,ಎಸ್.ಡಿ.ಪಿ.ಐ ಬೆಳ್ತಂಗಡಿ ತಾಲ್ಲೂಕು ಸಮಿತಿಯ ಕಾರ್ಯದರ್ಶಿ ನಿಸಾರ್ ಕುದ್ರಡ್ಕ,ಎಸ್.ಡಿ.ಪಿ.ಐ ಇಳಂತಿಳ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಪೈಸಲ್ ಮುರುಗೋಳಿ ಸೇರಿದಂತೆ ನಾಯಕರು,ಪಕ್ಷದ ಕ್ಯಾಡರ್ ಗಳು ಉಪಸ್ಥಿತರಿದ್ದರು.