ಕರಾವಳಿಕ್ರೈಂ

ಕೊಕ್ಕಡ: ಅಪರಿಚಿತ ವ್ಯಕ್ತಿಯ ಮಾತು ನಂಬಿ 1,46,900 ರೂ ಕಳೆದುಕೊಂಡ ಮಹಿಳೆ..!



ಒಟಿಪಿ ನಂಬರ್ ಪಡೆದುಕೊಂಡು ಖಾತೆಯಿಂದ ರೂ.1,46,900 ವರ್ಗಾಯಿಸಿಕೊಂಡು ಮೋಸ ಮಾಡಿರುವ ಬಗ್ಗೆ ಕೊಕ್ಕಡದ ಮಹಿಳೆಯೋರ್ವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

ಕೊಕ್ಕಡ ನಿವಾಸಿ ಹರಿಣಿ (40ವ) ಮೋಸ ಹೋದ ಮಹಿಳೆ. ಹರಿಣಿ ಅವರು ವಾರದ ಹಿಂದೆ ಜಮೀನು ಮಾರಾಟದ ಹಣವನ್ನು ಬ್ಯಾಂಕಿನಲ್ಲಿ ಜಮೆ ಮಾಡಿದ್ದರು. ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿಯೇ ಹರಿಣಿಯವರ ಜೊತೆಗೆ ಯಾರೋ ಅಪರಿಚಿತರು ವ್ಯವಹರಿಸಿ ಅ.21ರಂದು ಒಟಿಪಿ ಕೇಳಿ ಪಡೆದುಕೊಂಡು ಹರಿಣಿಯವರ ಖಾತೆಯಿಂದ ರೂ.1,46,900 ವರ್ಗಾಯಿಸಿ ಮೋಸ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಹರಿಣಿಯವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!