ರಾಷ್ಟ್ರೀಯ

ರೈಲು ನಿಲ್ದಾಣದಲ್ಲಿ ಸೂಟ್‌ಕೇಸ್ ತಲೆ ಮೇಲೆ ಹೊತ್ತು ಕಾರ್ಮಿಕರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ



ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದೆಹಲಿ ಆನಂದ ವಿಹಾರ್‌ ರೈಲು ನಿಲ್ದಾಣದಲ್ಲಿ ಸೆ.21ರಂದು ಕೂಲಿಗಳೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಆಲಿಸಿದ್ದಾರೆ.

ಕೂಲಿಗಳಂತೆ ಕೆಂಪು ಅಂಗಿ ಧರಿಸಿದ್ದ ಅವರು, ಸೂಟ್‌ಕೇಸನ್ನು ತಲೆ ಮೇಲೆ ಹೊತ್ತುಕೊಂಡಿರುವ ಹಾಗೂ ನೆಲದ ಮೇಲೆ ಕುಳಿತು ಸಮಸ್ಯೆ ಆಲಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕಾಂಗ್ರೆಸ್ ನಾಯಕನ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!