ಅ.8ರಂದು ಇರ್ದೆ ಪೇರಲ್ತಡ್ಕ ಬದ್ರಿಯಾ ಜುಮಾ ಮಸ್ಜಿದ್ ಉದ್ಘಾಟನೆ:ಸ್ವಾಗತ ಸಮಿತಿ ಚೇರ್‌ಮೆನ್ ಆಗಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ
ಪುತ್ತೂರು: ಬದ್ರಿಯಾ ಜುಮಾ ಮಸ್ಜಿದ್ ಪೇರಲ್ತಡ್ಕ -ಇರ್ದೆ ಇಲ್ಲಿ ನವೀಕೃತ ಮಸೀದಿ ಉಧ್ಘಾಟನೆ, ಸೌಹಾರ್ದ ಸಂಗಮ ಹಾಗೂ ಏಕದಿನ ಮತ ಪ್ರಭಾಷಣ ಅ.೮ರಂದು ನಡೆಯಲಿದ್ದು ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಮಸೀದಿಯನ್ನು ಉದ್ಘಾಟಿಸಲಿದ್ದಾರೆ.
ಆ ಪ್ರಯುಕ್ತ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಚೇರ್‌ಮೆನ್ ಆಗಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಕನ್ವೀನರ್ ಆಗಿ ಅಬ್ದುಲ್ ಕರೀಂ ಪೇರಲ್ತಡ್ಕ, ಕೋಶಾಧಿಕಾರಿಯಾಗಿ ಶರೀಫ್ ಕುಂಞಿಲಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ವೈಸ್ ಚೇರ್‌ಮೆನ್‌ಗಳಾಗಿ ಕೆ.ಎಂ ಹಮೀದ್ ಕೊಮ್ಮೆಮ್ಮಾರ್, ಹಸೈನಾರ್ ಬೂಡು, ವೈಸ್ ಕನ್ವೀನರ್‌ಗಳಾಗಿ ಅಬ್ದುಲ್ ಹಮೀದ್ ಪೇರಲ್ತಡ್ಕ ಹಾಗೂ ಫೈಝಲ್ ಪೇರಳ್ತಡ್ಕ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಹಾಜಿ ಪಿ.ಐ ಇಸ್ಮಾಯಿಲ್ ದಾರಿಮಿ, ಇಬ್ರಾಹಿಂ ಮದನಿ ಅಲ್ ಹುಮೈದಿ ನೇರಳಕಟ್ಟೆ, ಹನೀಫ್ ಅಸ್ಲಮಿ ಸೊರಕೆ, ಮುಹಮ್ಮದ್ ಹಾಜಿ(ನವಾಝ್) ಅಬ್ದುಲ್ ರಹಿಮಾನ್ ಮಣ್ಣಾಪು, ಪಿ.ಎ ಮುಹಮ್ನದ್ ಮದನಿ ಆಯ್ಕೆಯಾದರು. 100ಕ್ಕಿಂತ ಹೆಚ್ಚು ಜನ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.