ಕುಂಬ್ರ: ಸಾರೆಪುಣಿಯಲ್ಲಿ ಬೈಕ್’ಗಳ ನಡುವೆ ಡಿಕ್ಕಿ: ಮೂವರಿಗೆ ಗಾಯ
ಪುತ್ತೂರು: ಕುಂಬ್ರ ಸಮೀಪದ ಸಾರೆಪುಣಿಯಲ್ಲಿ ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡ ಘಟನೆ ಸೆ.12ರಂದು ರಾತ್ರಿ ನಡೆದಿದೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಕೊಂಡವರು ಎಲ್ಲಿಯವರು ಎಂಬ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಎಸ್ಕೆಎಸ್ಸೆಸ್ಸೆಫ್ ಮುಖಂಡ ಅಶ್ರಫ್ ಸಾರೆಪುಣಿ, ಸ್ಥಳೀಯರಾದ ರಫೀಕ್, ಉಸ್ಮಾನ್, ಹಂಝ, ಇಬ್ರಾಹಿಂ, ರಿಕ್ಷಾ ಚಾಲಕರಾದ ತಾಜುದ್ದಿನ್, ಶಾಕಿರ್ ಮೊದಲಾದವರು ಕಾರ್ಯ ಪ್ರವೃತ್ತರಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು.