ಕರಾವಳಿಕ್ರೈಂ

ಬಡಗನ್ನೂರು ಕುಡ್ಕಾಡಿಯಲ್ಲಿ ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ ಪ್ರಕರಣ: ದರೋಡೆ ನಡೆಸಿದ ಬಳಿಕ ಕಾಲು ಹಿಡಿದು ತೆರಳಿದರು..!

ಪುತ್ತೂರು: ತಾಲೂಕಿನ ಬಡಗನ್ನೂರು ಕುದ್ಕಾಡಿಯಲ್ಲಿ ಗ್ರಾ.ಪಂ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಗುರುಪ್ರಸಾದ್ ರೈ ಅವರ ಮನೆಯಲ್ಲಿ ಮನೆ ಮಂದಿಯನ್ನು ಕಟ್ಟಿ ಹಾಕಿ, ಬೆದರಿಸಿ ನಗದು, ಚಿನ್ನಾಭರಣ ಸಹಿತ ನಗದು ದೋಚಿದ ಘಟನೆ ಸೆ.6ರಂದು ತಡರಾತ್ರಿ ನಡೆದಿದ್ದು, ವಿಶೇಷ ಎಂದರೆ ದರೋಡೆಕೋರರು ದರೋಡೆ ನಡೆಸಿ ಹೋಗುವಾಗ ಮನೆಯ ಕಸ್ತೂರಿ ಹಾಗೂ ಗುರುಪ್ರಸಾದ್ ರೈ ಅವರ ಕಾಲು ಹಿಡಿದು ಬರುತ್ತೇವೆ ಎಂದು ಹೇಳಿ ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಎರಡು ಬಾರಿ ಕಸ್ತೂರಿಯವರ ಹಾಗೂ ಒಂದು ಬಾರಿ ಗುರುಪ್ರಸಾದ್ ರೈ ಅವರ ಕಾಲು ಹಿಡಿದು ನಾವು ಬರುತ್ತೇವೆ ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನು ಗಮನಿಸುವಾಗ ಯಾರೋ ಗೊತ್ತಿರುವವರೇ ಕೃತ್ಯ ನಡೆಸಿದ್ದಾರೆಯೇ ಎನ್ನುವ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಅಲ್ಲದೇ ಮನೆಯ ಯಜಮಾನಿ ಕಸ್ತೂರಿ ಅವರೂ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!