ಮಹಿಳೆಯರಿಗೆ ಯಾಕೆ 2000 ಕೊಡ್ಬೇಕು ಎಂದು ಪ್ರಶ್ನೆ ಮಾಡಿದವರ ಖಾತೆಗೂ ಹಣ ಜಮೆಯಾಗಿದೆ: ಶಾಸಕ ಅಶೋಕ್ ರೈ
ಪುತ್ತೂರು: ಕಾಂಗ್ರೆಸ್ ಸರಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಯಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದ ಕ ಜಿಲ್ಲೆಯ ಮಹಿಳೆಯರ ಖಾತೆಗೆ ಒಟ್ಟು 60 ಕೋಟಿ ರೂ ಕೋಟಿ ಸಂದಾಯವಾಗಲಿದ್ದು ವಾರ್ಷಿಕವಾಗಿ 720 ಕೋಟಿ ರೂ ಹಣ ಜಿಲ್ಲೆಯ ಮಹಿಳೆಯರ ಖಾತೆಗೆ ಜಮೆಯಾಗುತ್ತದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಈ ಹಣ ಮಹಿಳೆಯರ ಖಾತೆಗೆ ಬಾರದೇ ಇರುತ್ತಿದ್ದರೆ ಯಾರಿಗೋ ಗುತ್ತಿಗೆದಾರನಿಗೆ ಸೇರುತ್ತಿತ್ತು. ರಾಜ್ಯ ಸರಕಾರ ಎಲ್ಲಾ ಮಹಿಳೆಯರ ಖಾತೆಗೆ ತಲಾ 2000 ರೂ ಜಮೆ ಮಾಡಲಿದ್ದು ಇದರಿಂದ ಮಹಿಳೆಯರಿಗೆ ತುಂಬಾ ಪ್ರಯೋಜನವಾಗಿದೆ. ಅಡುಗೆ ಅನಿಲಕ್ಕೆ, ಮನೆಗೆ ಸಮಾನು ತರಲು, ಶಾಲೆಯ ಫೀಸ್ ಕಟ್ಟಬಹುದು ಹೀಗೆ ಆ ಹಣವನ್ನು ಒಳ್ಳೆಯದಕ್ಕೆ ಬಳಸಬಹುದಾಗಿದೆ. ಸರಕಾರದ ಯೋಜನೆಯನ್ನು ದೂರುತ್ತಿದ್ದವರು ಉಚಿತ ಕರೆಂಟ್ ಬಿಲ್ ಬಂದಾಗ ಬಿಲ್ಲನ್ನು ಒಳಗಿಟ್ಟು ಸುಮ್ಮನಿದ್ದಾರೆ ಎಂದು ಅವರು ಹೇಳಿದರು.
ಮಹಿಳೆಯರಿಗೆ ಯಾಕೆ ಹಣ ಕೊಡ್ಬೇಕು ಎಂದು ಕೇಳಿದವರೂ ಇದ್ದಾರೆ ಅವರಿಗೆಲ್ಲಾ 2000 ಖಾತೆಗೆ ಬಂದಿದೆ, ಅದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ನ ಯೋಜನೆಯ ಲಾಭವನ್ನು ಎಲ್ಲರೂ ಪಡೆದುಕೊಳ್ಳುತ್ತಿದ್ದು ಇದು ರಾಜ್ಯದ ಕಾಂಗ್ರೆಸ್ ಸರಕಾರ ಕೊಟ್ಟದ್ದು ಎಂಬ ನೆನಪು ನಿಮ್ಮಲ್ಲಿರಲಿ, ನಮಗೆ ಬೆಂಬಲ ಕೊಡಿ ಎಂದು ಶಾಸಕರು ಮನವಿ ಮಾಡಿದರು.