ಕರಾವಳಿ

ನಾನು ಬಡತನದಿಂದ ಮೇಲೆ ಬಂದವ, ನನ್ನ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಇರಬಾರದು: ಅಶೋಕ್ ರೈ




ಪುತ್ತೂರು: ನಾನು ಬಡತನದಿಂದ ಮೇಲೆ ಬಂದವ, ಬಡತನ ಏನೆಂಬುದು ನನಗೆ ಗೊತ್ತಿದೆ ಈ ಕಾರಣ ನಾನು ಹಸಿವನ್ನು ಚೆನ್ನಾಗಿ ಬಲ್ಲೆ, ನಾನು ಈಗ ಶಾಸಕನಾಗಿದ್ದೇನೆ ನನ್ನ ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಹಸಿವಿನಿಂದ ಮಲಗಬಾರದು, ಸೂರು, ಕುಡಿಯುವ ನೀರು ಮತ್ತು ಕರೆಂಟ್ ಎಲ್ಲರಿಗೂ ಸಿಗುವಂತಾಗಬೇಕಂಬುದೇ ನನ್ನ ಉದ್ದೇಶವಾಗಿದೆ ನನ್ನ ಅಧಿಕಾರದ ಅವಧಿಯಲ್ಲಿ ಬಡವರಿಗೆ ಇವೆಲ್ಲವನ್ನೂ ನೀಡಿಯೇ ಸಿದ್ದ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಆ.26 ರಂದು ಪುತ್ತೂರಿನಲ್ಲಿ ತನ್ನ ನೂತನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
94ಸಿ ಮತ್ತು 94 ಸಿಸಿ ಇದು ಇಲ್ಲಿನ ಬಡವರ ಹಕ್ಕು. ಯಾರೆಲ್ಲಾ ಸರಕಾರಿ ಜಾಗದಲ್ಲಿ ಮನೆ ಮಾಡಿಕೊಂಡಿದ್ದಾರೆ, ಅವರು ಮನೆ ಕಟ್ಟಿರುವ ಜಾಗ ಕಾನೂನು ಪ್ರಕಾರ ಸರಕಾರಕ್ಕೆ ಸೇರಿದ್ದೇ ಅದಲ್ಲಿ ಅವರಿಗೆ ಹಕ್ಕು ಪತ್ರ ಕೊಟ್ಟೇ ಕೊಡ್ತೇನೆ. ಅಕ್ರಮ ಸಕ್ರಮ ಅರ್ಜಿಗಳನ್ನು ಕೆಲವೇ ತಿಂಗಳಲ್ಲಿ ಪೂರ್ಣಗೊಳಿಸಲಿದ್ದು ನಯಾ ಪೈಸೆ ಲಂಚ ಕೊಡದೆ ಅಕ್ರಮಸಕ್ರಮ ಕಡತವನ್ನು ವಿಲೇವಾರಿ ಮಾಡಿಸುತ್ತೇನೆ ಎಂದರು.

ಮನೆ ಕಟ್ಟಲು ಜಾಗವೇ ಇಲ್ಲದವರಿಗೆ 3 ಸೆಂಟ್ಸ್ ಜಾಗವನ್ನು ನೀಡಿ ಅವರಿಗೆ ಸೂರು ಕಲ್ಪಿಸುವ ಯೋಜನೆ ಇದೆ, ಇದಕ್ಕಾಗಿ ವಿಟ್ಲದಲ್ಲಿ 7 ಎಕ್ರೆ ಜಾಗ ಮತ್ತು ಕುಂಬ್ರ ಸಮೀಪ ಸ್ವಂತ ಹಣದಿಂದ ಜಾಗವನ್ನು ಖರೀದಿ ಮಾಡಿದ್ದೇನೆ. ಈಗಾಗಲೇ ಜಾಗವೇ ಇಲ್ಲದ 600 ಮಂದಿ ನಿವೇಶನಕ್ಕಾಗಿ ಅರ್ಜಿ ಕೊಟ್ಟಿದ್ದಾರೆ. ವಿಧವೆಯವರಿಗೆ , ಅನಾಥರಿಗೆ, ನಿರ್ಗತಿಕರಿಗೆ ಮೊದಲ ಆದ್ಯತೆ ಮೇರೆಗೆ ಜಾಗವನ್ನು ಕೊಡಲಿದ್ದೇನೆ ಮತ್ತು ಪ್ರತೀ ಗ್ರಾಮದಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಅದನ್ನು ಕಾನೂನಾತ್ಮಕವಾಗಿ ಬಡವರಿಗೆ ಹಂಚುವ ಕೆಲಸವನ್ನು ಮಾಡುತ್ತೇನೆ. ನಾನು ಚುನಾವಣೆಗೆ ಮುಂಚೆ ನಿಮಗೆ ಕೊಟ್ಟ ಭರವಸೆಯನ್ನು ಮರೆತಿಲ್ಲ ಎಂದು ಹೇಳಿದ ಶಾಸಕರು ಕ್ಷೇತ್ರದ ಅಭಿವೃದ್ದಿಗೆ ಜನರ ಸಹಕಾರವನ್ನು ಕೋರಿದರು.

Leave a Reply

Your email address will not be published. Required fields are marked *

error: Content is protected !!