ಚಂದ್ರನನ್ನು ‘ಹಿಂದು ರಾಷ್ಟ್ರ’ ಎಂದು ಘೋಷಿಸಬೇಕು-ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ
ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುವ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರು ಚಂದ್ರಯಾನ-3 ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಕಾಲಿಟ್ಟ ಬೆನ್ನಲ್ಲೇ ಚಂದ್ರನನ್ನು ʼಹಿಂದು ರಾಷ್ಟ್ರʼ ಎಂದು ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

“ಚಂದ್ರನನ್ನು ಹಿಂದು ಸನಾತನ ರಾಷ್ಟ್ರ ಎಂದು ಸಂಸತ್ತು ಘೋಷಿಸಬೇಕು. ಚಂದ್ರಯಾನ-3 ಚಂದ್ರನ ಅಂಗಳಕ್ಕೆ ಕಾಲಿಟ್ಟ ಸ್ಥಳ “ಶಿವಶಕ್ತಿ ಪಾಯಿಂಟ್” ಅನ್ನು ಹಿಂದು ರಾಷ್ಟ್ರದ ರಾಜಧಾನಿಯೆಂದು ಘೋಷಿಸಬೇಕು, ಹೀಗೆ ಮಾಡುವ ಮೂಲಕ ಯಾವುದೇ ಉಗ್ರ ಅಥವಾ ಜಿಹಾದಿ ಮನೋವೃತ್ತಿಯವರು ಅಲ್ಲಿ ತಲುಪದಂತೆ ಮಾಡಬೇಕು,” ಎಂದು ಹೇಳಿದ್ದಾರೆ.