Author: news_bites_admin

ಕರಾವಳಿ

ಸುಳ್ಯ ಜಯನಗರದಲ್ಲೊಂದು ಮಾದರಿ ಜೇನುಗೂಡು ಸಂಘ

ಸುಳ್ಯ ಜಯನಗರ ಜೇನುಗೂಡು ಸಂಘ ಎಂಬ ಸ್ಥಳೀಯರ ತಂಡ ವಿವಿಧ ಸಮಾಜ ಸೇವೆಯ ಮೂಲಕ ಸುಳ್ಯದಲ್ಲಿ ಚಿರಪರಿಚಿತಗೊಂಡಿದೆ. ಈ ಸಂಘದ ಅನೇಕ ಮಂದಿ ಸದಸ್ಯರು ಬೇರೆ ಬೇರೆ ಊರುಗಳಲ್ಲಿ ತಮ್ಮ ತಮ್ಮ ಉದ್ಯೋಗದ ನಿಮಿತ್ತ ನೆಲೆಸಿಕೊಂಡಿದ್ದಾರೆ. ವರ್ಷದ ಕೆಲವೊಂದು ದಿನಗಳಲ್ಲಿ ಈ ಸಂಘದ ಸದಸ್ಯರು ಒಟ್ಟಾಗಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಂತೆ ಈ ಬಾರಿಯೂ ತಮ್ಮ ಊರಿನ ಪರಿಸರದಲ್ಲಿ ವಿವಿಧ ಜಾತಿಗಳ ಫಲ, ಪುಷ್ಪಗಳ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಜುಲೈ 30ರಂದು ಜಯನಗರ ಪರಿಸರದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸಿದರು. ಜಯನಗರ ಬ್ರಹ್ಮರಗಯಾ ಶ್ರೀ ಅಯ್ಯಪ್ಪ ದೇವಸ್ಥಾನ ವಠಾರದಿಂದ ಗಿಡಗಳನ್ನು ನೆಡುವ ಕಾರ್ಯಕ್ರಮ ಆರಂಭಗೊಳಿಸಿ ಜಯನಗರ ಮುಖ್ಯ ರಸ್ತೆಯ ಮೂಲಕ ಸಾಗಿ ಕೊರಂಬಡ್ಕ ಆದಿ ಮೊಗೇರ್ಕಳ ದೈವಸ್ಥಾನದ ಮುಂಭಾಗದಲ್ಲಿ ಸಮಾರೋಪಗೊಂಡಿತು. ಮಾವು, ಕೆಂಡಸಂಪಿಗೆ, ಪಾರಿಜಾತ, ಬಿಲ್ಲವ ಪತ್ರೆ, ಮೇ ಫ್ಲವರ್, ಹತ್ತಿ, ನೀಮ್ ಗಿಡಗಳನ್ನು ಸೇರಿದ ಸುಮಾರು ೨೫ ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಗಿಡಗಳ ರಕ್ಷಣಾ ಜಾಲಿಗಳನ್ನು  ಅಳವಡಿಸಲಾಯಿತು. ಅಲ್ಲದೆ ಕಳೆದ ವರ್ಷ ಮಳೆಗಾಲದಲ್ಲಿ ನೆಟ್ಟಿರುವಂತಹ ಗಿಡಗಳ ರಕ್ಷಣಾ ಜಾಲಿಗಳ ದುರಸ್ತಿ ಕಾರ್ಯವನ್ನು ಕೂಡ ಮಾಡಲಾಯಿತು. ಪ್ರತಿಯೊಂದು ಗಿಡಗಳ ರಕ್ಷಣಾ ಜಾಲಿಯಲ್ಲಿ ಸಂಘದ ಸದಸ್ಯರ ನಾಮಫಲಕವನ್ನು ಅಳವಡಿಸಿ ಗಿಡದ ಪಾಲನೆಯನ್ನು ಆ ಸದಸ್ಯರ ಜವಾಬ್ದಾರಿಗೆ ನೀಡುವ ಯೋಜನೆಯನ್ನು ಸಂಘದ ವತಿಯಿಂದ ರೂಪಿಸಲಾಗಿದೆ. ಸುಮಾರು ೩೦ಕ್ಕೂ ಹೆಚ್ಚು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Read More
ರಾಜಕೀಯರಾಜ್ಯ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸಿ.ಟಿ ರವಿ ಹೇಳಿದ್ದೇನು ಗೊತ್ತಾ..?

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಿಟಿ ರವಿ ಅವರ ಹೆಸರು ಕೇಳಿ ಬಂದಿದ್ದು ಇದಕ್ಕೆ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ

Read More
ಕರಾವಳಿ

ಮಿತ್ತೂರು: ಗ್ಯಾಸ್ ಟ್ಯಾಂಕರ್ ಸ್ಕಿಡ್-ರಸ್ತೆ ಬ್ಲಾಕ್

ಪುತ್ತೂರು: ಕಬಕ ಸಮೀಪದ ಮಿತ್ತೂರು ಏಮಾಜೆಯಲ್ಲಿರುವ ಗ್ಯಾಸ್ ಕಂಪೆನಿಗೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಚಾಕೋಟಡಿ ಎಂಬಲ್ಲಿ ಸ್ಕಿಡ್ ಆಗಿ ರಸ್ತೆ ಬದಿಗೆ ವಾಲಿ ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.  ಕೊನೆಗೆ ಕ್ರೇನ್‌ನ ಸಹಾಯದಿಂದ ಟ್ಯಾಂಕರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Read More
ಜಿಲ್ಲೆ

ಜಲಪಾತ ವೀಕ್ಷಣೆ ಮಾಡುವ ವೇಳೆ ನೀರು ಪಾಲಾಗಿದ್ದ ಯುವಕನ ಮೃತದೇಹ ವಾರದ ಬಳಿಕ ಪತ್ತೆ

ಕುಂದಾಪುರ ತಾಲೂಕಿನ ಕೊಲ್ಲೂರಿನ ಅರಶಿನ ಗುಂಡಿ ಜಲಪಾತ ವೀಕ್ಷಣೆ ಮಾಡಲು ಹೋಗಿ ಜಾರಿ ಬಿದ್ದು ನೀರುಪಾಲಾಗಿದ್ದ ಭದ್ರಾವತಿ ಮೂಲದ ಯುವಕ ಶರತ್ ಮೃತದೇಹ ವಾರದ ಬಳಿಕ ಪತ್ತೆಯಾಗಿದೆ.

Read More
ಜಿಲ್ಲೆ

ಕೊಡಗು:ಕಾಫಿ ತೋಟದಲ್ಲಿ ಕಾಡಾನೆ ಸಾವು

ಕಾಡಾನೆಯೊಂದು ಸತ್ತು ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಗ್ರಾಮದ ಕಂಬಿಬಾಣೆಯ ಕಾಫಿ ತೋಟವೊಂದರಲ್ಲಿ ಕಂಡು ಬಂದಿದೆ.ಉದಯ ಎಂಬವರ ತೋಟದಲ್ಲಿ ಘಟನೆ ನಡೆದಿದ್ದು ಕಳೆದೆರಡು

Read More
ಕರಾವಳಿಕ್ರೈಂ

ವಿಟ್ಲ: ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್- ಐದು ಮಂದಿಯ ವಿರುದ್ಧ ಪ್ರಕರಣ ದಾಖಲು

ವಿಟ್ಲ : ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಗ್ಯಾಂಪ್ ರೇಪ್ ನಡೆಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆರುವಾಯಿ ಮೂಲದ ಬಾಲಕಿ ಮೇಲೆ ಕೇರಳ ಭಾಗದ

Read More
ಕರಾವಳಿಜಿಲ್ಲೆರಾಜ್ಯ

ಆ.1 ರಂದು ಸಿಎಂ ಸಿದರಾಮಯ್ಯ  ದ.ಕ ಮತ್ತು ಉಡುಪಿ ಜಿಲ್ಲಾ ಪ್ರವಾಸ

 ಸಿಎಂ ಸಿದರಾಮಯ್ಯ ಅವರು ಆ.1 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ ವಿಮಾನ ಮೂಲಕ 11 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ

Read More
ಕರಾವಳಿ

ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಸುಳ್ಯ ನಗರದಲ್ಲಿ ಬ್ಯಾನರ್ ಅಳವಡಿಕೆ: ಸೌಜನ್ಯ ಅಣ್ಣ ತಮ್ಮಂದಿರ ಬಳಗ ಸುಳ್ಯ ಎಂಬ ಹೆಸರಿನಲ್ಲಿ ಬ್ಯಾನರ್ ಪ್ರತ್ಯಕ್ಷ

ಸುಳ್ಯ: ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಸುಳ್ಯ ನಗರದಲ್ಲಿ ಬ್ಯಾನರ್ ಅಳವಡಿಕೆ ಮಾಡಿರುವ ವಿಚಾರ ವರದಿಯಾಗಿದೆ. ಸೌಜನ್ಯ ಅಣ್ಣ ತಮ್ಮಂದಿರ ಬಳಗ ಸುಳ್ಯ ಎಂಬ ಹೆಸರಿನಲ್ಲಿ ಬ್ಯಾನರ್

Read More
ಕರಾವಳಿ

ನರಿಮೊಗರು ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ಹಾಗೂ ಪಶು ಚಿಕಿತ್ಸಾಲಯ ತೆರೆಯಲು ವೇದನಾಥ ಸುವರ್ಣ ಆಗ್ರಹ

ಪುತ್ತೂರು: ನರಿಮೊಗರು ಗ್ರಾ.ಪಂ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ತೆರೆಯಬೇಕೆಂದು ಕಾಂಗ್ರೆಸ್ ಮುಖಂಡ ವೇದನಾಥ ಸುವರ್ಣ ಆಗ್ರಹಿಸಿದ್ದಾರೆ.  ಜು.27ರಂದು ನಡೆದ ನರಿಮೊಗರು ಗ್ರಾ.ಪಂ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ನಮ್ಮ ಹಲವು ವರ್ಷಗಳ ಬೇಡಿಕೆಗಳಲ್ಲೊಂದಾಗಿರುವ ಆರೋಗ್ಯ ಕೇಂದ್ರವನ್ನು ನರಿಮೊಗರು ವ್ಯಾಪ್ತಿಯಲ್ಲಿ ತೆರೆಯಬೇಕು. ನಮ್ಮ ಈ ವರೆಗಿನ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ, ಮುಂದಕ್ಕೆ ನರಿಮೊಗರು ಕೇಂದ್ರ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ತೆರೆಯಲು ಸಂಬಂಧಪಟ್ಟವರು ಕ್ರಮ ವಹಿಸಬೇಕು, ಮಾತ್ರವಲ್ಲ ಆರೋಗ್ಯ ಸಚಿವರಿಗೂ ಈ ವಿಷಯದ ಬಗ್ಗೆ ಮನವಿ ಕೊಡಬೇಕು ಎಂದು ಅವರು ಆಗ್ರಹಿಸಿದರು. ನರಿಮೊಗರು ವ್ಯಾಪ್ತಿಯಲ್ಲಿ ಪಶು ಚಿಕಿತ್ಸಾಲಯವೂ ಇಲ್ಲ, ಮುಂದಿನ ದಿನಗಳಲ್ಲಿ ಅದೂ ಆಗಬೇಕು. ಸದ್ಯಕ್ಕೆ ದಿನದಲ್ಲಿ ಒಂದು ಹೊತ್ತಾದರೂ ನರಿಮೊಗರು ವ್ಯಾಪ್ತಿಯಲ್ಲಿ ಪಶು ವೈದ್ಯಾಧಿಕಾರಿ ಇರುವಂತೆ ವ್ಯವಸ್ಥೆ ಮಾಡಬೇಕೆಂದು ವೇದನಾಥ ಸುವರ್ಣ ಒತ್ತಾಯಿಸಿದರು.

Read More
error: Content is protected !!