ಕರಾವಳಿ

ಸುಳ್ಯ ಜಯನಗರದಲ್ಲೊಂದು ಮಾದರಿ ಜೇನುಗೂಡು ಸಂಘಸುಳ್ಯ ಜಯನಗರ ಜೇನುಗೂಡು ಸಂಘ ಎಂಬ ಸ್ಥಳೀಯರ ತಂಡ ವಿವಿಧ ಸಮಾಜ ಸೇವೆಯ ಮೂಲಕ ಸುಳ್ಯದಲ್ಲಿ ಚಿರಪರಿಚಿತಗೊಂಡಿದೆ. ಈ ಸಂಘದ ಅನೇಕ ಮಂದಿ ಸದಸ್ಯರು ಬೇರೆ ಬೇರೆ ಊರುಗಳಲ್ಲಿ ತಮ್ಮ ತಮ್ಮ ಉದ್ಯೋಗದ ನಿಮಿತ್ತ ನೆಲೆಸಿಕೊಂಡಿದ್ದಾರೆ. ವರ್ಷದ ಕೆಲವೊಂದು ದಿನಗಳಲ್ಲಿ ಈ ಸಂಘದ ಸದಸ್ಯರು ಒಟ್ಟಾಗಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಂತೆ ಈ ಬಾರಿಯೂ ತಮ್ಮ ಊರಿನ ಪರಿಸರದಲ್ಲಿ ವಿವಿಧ ಜಾತಿಗಳ ಫಲ, ಪುಷ್ಪಗಳ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಜುಲೈ 30ರಂದು ಜಯನಗರ ಪರಿಸರದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸಿದರು.

ಜಯನಗರ ಬ್ರಹ್ಮರಗಯಾ ಶ್ರೀ ಅಯ್ಯಪ್ಪ ದೇವಸ್ಥಾನ ವಠಾರದಿಂದ ಗಿಡಗಳನ್ನು ನೆಡುವ ಕಾರ್ಯಕ್ರಮ ಆರಂಭಗೊಳಿಸಿ ಜಯನಗರ ಮುಖ್ಯ ರಸ್ತೆಯ ಮೂಲಕ ಸಾಗಿ ಕೊರಂಬಡ್ಕ ಆದಿ ಮೊಗೇರ್ಕಳ ದೈವಸ್ಥಾನದ ಮುಂಭಾಗದಲ್ಲಿ ಸಮಾರೋಪಗೊಂಡಿತು.

ಮಾವು, ಕೆಂಡಸಂಪಿಗೆ, ಪಾರಿಜಾತ, ಬಿಲ್ಲವ ಪತ್ರೆ, ಮೇ ಫ್ಲವರ್, ಹತ್ತಿ, ನೀಮ್ ಗಿಡಗಳನ್ನು ಸೇರಿದ ಸುಮಾರು ೨೫ ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಗಿಡಗಳ ರಕ್ಷಣಾ ಜಾಲಿಗಳನ್ನು  ಅಳವಡಿಸಲಾಯಿತು.

ಅಲ್ಲದೆ ಕಳೆದ ವರ್ಷ ಮಳೆಗಾಲದಲ್ಲಿ ನೆಟ್ಟಿರುವಂತಹ ಗಿಡಗಳ ರಕ್ಷಣಾ ಜಾಲಿಗಳ ದುರಸ್ತಿ ಕಾರ್ಯವನ್ನು ಕೂಡ ಮಾಡಲಾಯಿತು.

ಪ್ರತಿಯೊಂದು ಗಿಡಗಳ ರಕ್ಷಣಾ ಜಾಲಿಯಲ್ಲಿ ಸಂಘದ ಸದಸ್ಯರ ನಾಮಫಲಕವನ್ನು ಅಳವಡಿಸಿ ಗಿಡದ ಪಾಲನೆಯನ್ನು ಆ ಸದಸ್ಯರ ಜವಾಬ್ದಾರಿಗೆ ನೀಡುವ ಯೋಜನೆಯನ್ನು ಸಂಘದ ವತಿಯಿಂದ ರೂಪಿಸಲಾಗಿದೆ. ಸುಮಾರು ೩೦ಕ್ಕೂ ಹೆಚ್ಚು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!