ಕಡಬ: ಚಿನ್ನದಂಗಡಿ ಶುಭಾರಂಭದ ಸಿದ್ಧತೆಯಲ್ಲಿದ್ದ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ: ಪೋಸ್ಟ್ ಮಾರ್ಟಂ ವರದಿಯಲ್ಲಿ ಅನುಮಾನಗಳಿಗೆ ಉತ್ತರ
ಕಡಬ: ಚಿನ್ನದ ಅಂಗಡಿಯ ಉದ್ಘಾಟನೆಯ ದಿನವೇ ಗುಂಡ್ಯದ ಕೆಂಪು ಹೊಳೆ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಾಗಪ್ರಸಾದ್ ಅವರ ಪೋಸ್ಟ್ ಮಾರ್ಟಂ ವರದಿ ಬಂದಿದ್ದು ರಸ್ತೆ ಅಪಘಾತಕ್ಕೆ ಬಲಿಯಾಗಿರುವುದಾಗಿ ತಿಳಿದು ಬಂದಿದೆ.
ಮರ್ಧಾಳದಲ್ಲಿ ಉದ್ಘಾಟನೆಗೆ ಸಜ್ಜಾಗಿದ್ದ ಐಶ್ವರ್ಯ ಗೋಲ್ಡ್ ಹೆಸರಿನ ಚಿನ್ನದಂಗಡಿ ಮಾಲಕ ಕಡಬ ನಿವಾಸಿ ದಯಾನಂದ ಆಚಾರ್ಯ ಎಂಬವರ ಪುತ್ರ ನಾಗಪ್ರಸಾದ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಬಗ್ಗೆ ಸಾರ್ವಜನಿಕವಾಗಿ ಹಲವು ಅನುಮಾನಗಳಿದ್ದ ಕಾರಣ ಪೊಲೀಸರು ಕೂಡ ಪೋಸ್ಟ್ ಮಾರ್ಟಮ್ ವರದಿಗಾಗಿ ಕಾಯುತ್ತಿದ್ದರು. ಇದೀಗ ಪೋಸ್ಟ್ ಮಾರ್ಟಮ್ ವರದಿ ಬಂದಿದ್ದು ನಾಗಪ್ರಸಾದ್ ಅಪಘಾತದಿಂದಲೇ ಮರಣಪಟ್ಟಿದ್ದಾರೆ ಎಂದು ದೃಢಪಟ್ಟಿರುವುದಾಗಿ ವರದಿಯಾಗಿದೆ. ಸ್ಥಳದಲ್ಲಿದ್ದ 2 ಹೆಲ್ಮೆಟ್ ನಾಗಪ್ರಸಾದ್ ಅವರೇ ತೆಗೆದುಕೊಂಡು ಹೋಗಿದ್ದರು ಎಂದು ತಿಳಿದು ಬಂದಿದೆ.