ಸ್ವಾಮೀಜಿ ಅರೆಸ್ಟ್ ಆದ್ರೆ ದೊಡ್ಡ ದೊಡ್ಡವರೆಲ್ಲಾ ಸಿಕ್ಕಿ ಬೀಳ್ತಾರೆ- ಚೈತ್ರಾ ಕುಂದಾಪುರ ಸ್ಫೋಟಕ ಹೇಳಿಕೆ
ಬೆಂಗಳೂರು: ಸ್ವಾಮೀಜಿ ಅರೆಸ್ಟ್ ಆಗಲಿ, ಆಗ ದೊಡ್ಡ ದೊಡ್ಡವರೆಲ್ಲಾ ಸಿಕ್ಕಿ ಬೀಳ್ತಾರೆ ಎಂದು ಉದ್ಯಮಿಗೆ ವಂಚನೆ ಮಾಡಿರುವ ಆರೋಪದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ಮಹಿಳಾ ಸಾಂತ್ವಾನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಬಂದ ಚೈತ್ರಾ ಕುಂದಾಪುರ “ಸ್ವಾಮೀಜಿ ಅರೆಸ್ಟ್ ಆಗಲಿ. ಆಗ ದೊಡ್ಡ ದೊಡ್ಡವರೆಲ್ಲಾ ಸಿಕ್ಕಿ ಬೀಳ್ತಾರೆ”
ಸ್ವಾಮೀಜಿ ಸಿಕ್ಕಿ ಹಾಕಿಕೊಂಡ ನಂತರ ದೊಡ್ಡ ದೊಡ್ಡವರ ಹೆಸರುಗಳು ಹೊರ ಬರುತ್ತವೆ. ಸ್ವಾಮೀಜಿ ಸಿಕ್ಕ ನಂತರವೇ ಎಲ್ಲವೂ ಗೊತ್ತಾಗಲಿದೆ ಎಂದು ಹೇಳುತ್ತಾ ಚೈತ್ರಾ ಪೊಲೀಸ್ ಕಚೇರಿ ಒಳಗೆ ಹೋಗಿದ್ದಾರೆ. ಚೈತ್ರಾ ಹೇಳಿಕೆ ಕುತೂಹಲ ಮತ್ತು ಅಚ್ಚರಿ ಮೂಡಿಸಿದೆ.