ಚಲಿಸುತ್ತಿದ್ದ ಆಟೋದಲ್ಲಿ ಪ್ರೇಯಸಿಯ ಕತ್ತು ಸೀಳಿ ಹತ್ಯೆಗೈದ ಕಿರಾತಕ ಪ್ರೇಮಿ
ಚಲಿಸುತ್ತಿದ್ದ ಆಟೋದಲ್ಲಿ ಕೊಲೆ ನಡೆದಿದೆ. ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಮುಂಬೈನ ಸಕಿನಾಕಾ ಪ್ರದೇಶದಲ್ಲಿ ಜೋಡಿಯೊಂದು ಪ್ರಯಾಣಿಸುತ್ತಿದ್ದ ವೇಳೆ ವೈಯಕ್ತಿಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಕೋಪಗೊಂಡ ವ್ಯಕ್ತಿ ತನ್ನ ಜತೆಯಲ್ಲಿದ್ದ ಮಹಿಳೆಯ ಕತ್ತು ಸೀಳಿದ್ದಾನೆ ಎನ್ನಲಾಗಿದೆ.

ಕೃತ್ಯವೆಸಗಿದ ನಂತರ ಚಲಿಸುತ್ತಿದ್ದ ಆಟೋದಿಂದ ಜಿಗಿದು ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
31 ವರ್ಷದ ಪಂಚಶಿಲಾ ಅಶೋಕ್ ಜಾಮ್ದಾರ್ ಎಂಬ ಮಹಿಳೆ ಕೊಲೆಯಾಗಿದ್ದಾರೆ. ಆರೋಪಿ ಕಟರ್ ಬಳಸಿ ಈಕೆಯ ಕತ್ತು ಸೀಳಿದ್ದಾನೆ ಎನ್ನಲಾಗಿದೆ.