ಚಲಿಸುತ್ತಿದ್ದ ಬಸ್’ನಿಂದ ರಸ್ತೆಗೆ ಬಿದ್ದು ಪ್ರಯಾಣಿಕ ಸಾವು
ಚಲಿಸುತ್ತಿದ್ದ KSRTC ಬಸ್ ನಿಂದ ರಸ್ತೆಗೆ ಬಿದ್ದು ಪ್ರಯಾಣಿಕರೋರ್ವರು ಸಾವನ್ನಪ್ಪಿರುವಂತಹ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಬಳಿ ನಡೆದಿದೆ. ಚಲುವೇಗೌಡ ಮೃತ ಪ್ರಯಾಣಿಕ.

ಬಸ್ ಭರ್ತಿಯಾದ ಹಿನ್ನೆಲೆ ಫುಟ್ಬೋರ್ಡ್ನಲ್ಲಿ ನಿಂತಿದ್ದ ಚಲುವೇಗೌಡ, ಈ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಜಕ್ಕನಹಳ್ಳಿ ಕಡೆಯಿಂದ ಮಂಡ್ಯ ಕಡೆ KSRTC ಬಸ್ ಹೊರಟಿದ್ದಾಗ ಅವಘಡ ಸಂಭವಿಸಿದೆ.