ಮೂವರು ಅಂತರ್ರಾಜ್ಯ ಡ್ರಗ್ಸ್ ಪೆಡ್ಲರ್’ಗಳ ಬಂಧನ
ಮೂವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಗಳನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರೇಮಾ, ಸುನೀತಾ, ಮುತ್ಯಾಲಮ್ಮ ಬಂಧಿತರು. ಜಾರ್ಖಂಡ್ನಿಂದ ಗಾಂಜಾ ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಜಾರ್ಖಂಡ್ನ ಗುಡ್ಡಗಾಡು ಪ್ರದೇಶದಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು. ಸಣ್ಣಸಣ್ಣ ಪ್ಯಾಕೆಟ್ ಮಾಡಿ ಕಾಲೇಜು, ಅಂಗಡಿಗಳ ಬಳಿ ಮಾರುತ್ತಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ನಗರದ 8 ವಿಭಾಗಗಳಲ್ಲಿ ಕಳೆದ ಕೆಲ ದಿನಗಳಲ್ಲಿ 38 ಡ್ರಗ್ ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. 55 ಕೆಜಿ ಗಾಂಜಾ, 215 ಗ್ರಾಂ ಗಾಂಜಾ ಎಣ್ಣೆ, 768 ಗ್ರಾಂ ಅಫೀಮು, 15 ಗ್ರಾಂ ಸಿಂಥೆಟಿಕ್ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.