ರಾಜ್ಯ

ಗ್ಯಾರಂಟಿ ಯೋಜನೆ: ಯುವ ನಿಧಿ ಯೋಜನೆ ಪಡೆದುಕೊಳ್ಳಬೇಕಾದರೆ ಮಾನದಂಡಗಳೇನು..?

ಸಿದ್ದರಾಮಯ್ಯ ಸರಕಾರ ಘೋಷಿಸಿದ 5 ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿಯೂ ಒಂದು. ಹಾಗಾದರೆ ಯುವನಿಧಿ ಯೋಜನೆಗೆ ಮಾನದಂಡಗಳೇನು?
ಪದವಿ/ ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಸಿಗದ ಕನ್ನಡಿಗರು ಮಾತ್ರ ಯುವ ನಿಧಿ ಯೋಜನೆಗೆ ಅರ್ಹರಾಗಿರುತ್ತಾರೆ.


2 ವರ್ಷಗಳ ಅವಧಿಗೆ ಮಾತ್ರ ಯುವ ನಿಧಿ ಯೋಜನೆ ಭತ್ಯೆ ಪಡೆಯಬಹುದು.
2 ವರ್ಷದೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗಳಿಗೆ ಸೌಲಭ್ಯ ಸ್ಥಗಿತ
ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು
ಫಲಾನುಭವಿಗಳಿಗೆ ಡಿಬಿಟಿ ಮೂಲಕ ಯುವ ನಿಧಿ ಯೋಜನೆ ಭತ್ಯೆ ಪಾವತಿ
ಉದ್ಯೋಗ ಪಡೆದ ಬಳಿಕ ತಪ್ಪು ಘೋಷಣೆ ಮಾಡಿದರೆ ದಂಡ ಹಾಕಲಾಗುತ್ತೆ
ಪದವಿ/ ಡಿಪ್ಲೋಮಾ ಬಳಿಕ ಉನ್ನತ ವ್ಯಾಸಂಗ ಮುಂದುವರಿಸಿದ್ರೆ ಭತ್ಯೆ ಇಲ್ಲ
ಅಪ್ರೆಂಟಿಸ್ ವೇತನ ಪಡೆಯುತ್ತಿರುವವರಿಗೆ ಯುವ ನಿಧಿ ಯೋಜನೆ ಭತ್ಯೆ ಇಲ್ಲ.



2022-23ರಲ್ಲಿ ಉತ್ತೀರ್ಣರಾಗಿರುವ 18ರಿಂದ 25 ವರ್ಷದೊಳಗಿನ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಮಂಗಳಮುಖಿಯರಿಗೂ ಇದು ಅನ್ವಯವಾಗುತ್ತದೆ ಎಂದು ನಿನ್ನೆ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು.

Leave a Reply

Your email address will not be published. Required fields are marked *

error: Content is protected !!