ಹಾರಿಸ್ (ಪರ್ಲಡ್ಕ) ದರ್ಬೆ ನಿಧನಕ್ಕೆ ಎಸ್‌ಡಿಪಿಐ ಸಂತಾಪ
ಪುತ್ತೂರು: ಪರ್ಲಡ್ಕ ನಿವಾಸಿ ಪ್ರಸ್ತುತ ಜುಬೈಲ್ ನಲ್ಲಿ ಉದ್ಯಮಿಯಾಗಿರುವ ಹಾರಿಸ್ ದರ್ಬೆ ರವರು ಹೃದಯಾಘಾತದಿಂದ ನಿಧನ ಹೊಂದಿದ ವಾರ್ತೆಯೂ ಅತೀವ ನೋವನ್ನು ತರಿಸಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯು ಇವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.

ಹಾರಿಸ್ ದರ್ಬೆ ಯವರು ಕೊಡುಗೈದಾನಿಯಾಗಿದ್ದರು,
ಹಲವು ಸಂಘಸಂಸ್ಥೆಗಳಲ್ಲಿದ್ದುಕೊಂಡು ಹಾಗೂ ವೈಯುಕ್ತಿಕವಾಗಿಯೂ ಸಮುದಾಯಕ್ಕೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಿದ್ದರು,ಇವರ ಅಗಲುವಿಕೆಯು ಸಮುದಾಯಕ್ಕೆ ಅಪಾರ ನಷ್ಟವಾಗಿದೆ. ಮೃತರ ಪಾರತ್ರಿಕ ಲೋಕವನ್ನು ಅಲ್ಲಾಹನು ಯಶಸ್ಸು ಗೊಳಿಸಲಿ, ಕುಟುಂಬಕ್ಕೆ ಮತ್ತು ಬಂದು ಬಳಗಕ್ಕೆ ಇವರ ಅಕಾಲಿಕ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು
SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ತಿಳಿಸಿದ್ದಾರೆ.



