ಪುತ್ತೂರಿನಲ್ಲಿ ಬಿಜೆಪಿVS ಹಿಂದುತ್ವದ ನಡುವಿನ ಕಚ್ಚಾಟಕ್ಕೆ ಕಾಂಗ್ರೆಸ್’ನ್ನು ಎಳೆದು ತರುವುದು ಬೇಡ-ಕಾರ್ಯಕರ್ತರ ಆಗ್ರಹ
ಪುತ್ತೂರಿನಲ್ಲಿ ಬಿಜೆಪಿ ಮತ್ತು ಹಿಂದುತ್ವದ ಮಧ್ಯೆ ಪೈಪೋಟಿ ನಡೆಯುತ್ತಿದ್ದು ಚುನಾವಣೆ ಸಂದರ್ಭದಲ್ಲಿ ಪ್ರಾರಂಭವಾದ ಅವರ ಆಂತರಿಕ ಕಚ್ಚಾಟ ಈಗಲೂ ಮುಂದುವರಿದಿದೆ. ಇದೀಗ ಬ್ಯಾನರ್ ವಿಚಾರದಲ್ಲಿ ಹಲವರ ಮೇಲೆ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪದ ಹಲ್ಲೆಗಳಾಗಿದ್ದು ಇದು ಬಿಜೆಪಿ ಹಾಗೂ ಹಿಂದುತ್ವದ ನಡುವಿನ ಸಂಘರ್ಷವಾಗಿದೆ ಇದಕ್ಕೆ ಕಾಂಗ್ರೆಸ್ ಅನ್ನು ಎಳೆದು ತರುವ ಪ್ರಯತ್ನವನ್ನು ಕೆಲ ಬಿಜೆಪಿ ನಾಯಕರು ಮಾಡುತ್ತಿರುವುದು ಅಕ್ಷಮ್ಯ ಎಂದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ವಿಚಾರಗಳನ್ನು ಹಂಚಿಕೊಂಡಿದ್ದು ಪುತ್ತೂರಿನಲ್ಲಿ ಸದ್ಯ ನಡೆಯುತ್ತಿರುವ ಘಟನೆಗಳಿಗೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ ಕೆಲವರು ಕಾಂಗ್ರೆಸ್ನ ಹೆಸರನ್ನು ಎಳೆದು ತಂದು ಗೊಂದಲ ಸೃಷ್ಟಿಸುತ್ತಿದ್ದು ಪ್ರಜ್ಞಾವಂತ ಜನರಿಗೆ ಎಲ್ಲವೂ ಅರ್ಥವಾಗುತ್ತಿದೆ, ನಿಮ್ಮೊಳಗಿನ ಕಚ್ಚಾಟವನ್ನು ಕಾಂಗ್ರೆಸ್ ನ ತಲೆಗೆ ಕಟ್ಟುವ ಪ್ರಯತ್ನ ಮಾಡಬೇಡಿ ಎಂದು ಹಲವರು ಬರೆದುಕೊಂಡಿದ್ದಾರೆ.