ಪುತ್ತೂರು-ಕುಂಬ್ರ ಸಿಟಿ ಬಸ್‌ನ್ನು ನಮ್ಮ ಬೇಡಿಕೆ ಮೇರೆಗೆ ಕೌಡಿಚ್ಚಾರ್ ವರೆಗೂ ವಿಸ್ತರಣೆ ಮಾಡಿರುವುದು ಸಂತೋಷ ತಂದಿದೆ: ಇಕ್ಬಾಲ್ ಹುಸೇನ್
ಪುತ್ತೂರು-ಕುಂಬ್ರ ಸಿಟಿ ಬಸ್‌ನ್ನು ನಮ್ಮ ಬೇಡಿಕೆ ಮೇರೆಗೆ ಕೌಡಿಚ್ಚಾರ್ ವರೆಗೂ ವಿಸ್ತರಣೆ ಮಾಡಿರುವುದು ಬಹಳ ಸಂತೋಷ ತಂದಿದೆ. ನಮ್ಮ ಬೇಡಿಕೆ ಈಡೇರಿಸಿದ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ತಿಳಿಸಿದ್ದಾರೆ. ಕೌಡಿಚ್ಚಾರ್ ವರೆಗೂ ಸಿಟಿ ಬಸ್ ಬರುವುದರಿಂದ ಈ ಭಾಗದಿಂದ ಹೋಗುವ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲಕವಾಗಲಿದೆ. ಈ ನಿಟ್ಟನಲ್ಲಿ ನಾವು ಮಾಡಿಕೊಂಡಿರುವ ಮನವಿಗೆ ಸ್ಪಂದನೆ ಸಿಕ್ಕಿದೆ. ಇದಕ್ಕಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿಯವರಿಗೆ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರಿಗೆ, ಒಳಮೊಗ್ರು ಹಾಗೂ ಅರಿಯಡ್ಕ ವಲಯ ಕಾಂಗ್ರೆಸ್‌ನ ಪದಾಧಿಕಾರಿಗಳಿಗೆ, ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.