ಪ್ರೀತ್ಸೇ, ಪ್ರೀತ್ಸೇ ಎಂದ ಕಿರಾತಕ ಕೊಂದೇ ಬಿಟ್ಟ
ಪುತ್ತೂರು: ಮುಂಡೂರು ಸಮೀಪದ ಕಂಪ ಬದಿಯಡ್ಕ ದಲ್ಲಿ ಮನೆಗೆ ನುಗ್ಗಿ ಯುವತಿಯೋರ್ವಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿ ಕನಕಮಜಲಿನ ಉಮೇಶ್ ಎಂಬಾತನನ್ನು ಸಂಪ್ಯ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಸುಳ್ಯ ಸಮೀಪದ ಕನಕಮಜಲು ನಿವಾಸಿ ಉಮೇಶ ಎಂಬಾತ ಜ.17ರಂದು ಜಯಶ್ರೀ ಅವರ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದ.
ಉಮೇಶ ಜಯಶ್ರೀಯನ್ನು ಕೆಲವು ಸಮಯಗಳಿಂದ ಪ್ರೀತಿಸುತಿದ್ದು ಇತ್ತೀಚೆಗೆ ಜಯಶ್ರೀ ಅವರು ಉಮೇಶನ ಜೊತೆ ಮಾತನಾಡದೆ ದೂರವಾಗಿದ್ದಳು ಎನ್ನಲಾಗಿದೆ.
ಇದರಿಂದ ಕೋಪಗೊಂಡ ಉಮೇಶ ಜಯಶ್ರೀ ಮನೆಗೆ ನುಗ್ಗಿ ಹತ್ಯೆ ಮಾಡಿರುವುದಾಗಿ ಸಂಶಯಿಸಲಾಗಿದೆ.
ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.