ಮಂಗಳೂರು ಆಫೀಸರ್ ಕ್ಲಬ್ ಹ್ಯಾಟ್ ಇನ್’ನಲ್ಲಿ ಕಲಿಯೋಣ ಬನ್ನಿ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭ
ಮಂಗಳೂರು: ಸ್ವರ ಮಾಧುರ್ಯ ಬಳಗ ಪುತ್ತೂರು ಇದರ ವತಿಯಿಂದ ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಬಿಗ್ ಸಿಟಿ ಇದರ ಸಹಯೋಗದಲ್ಲಿ ಮಂಗಳೂರು ಆಫೀಸರ್ ಕ್ಲಬ್ ಹ್ಯಾಟ್ ಹಿಲ್ ನಲ್ಲಿ ಕಲಿಯೋಣ ಬನ್ನಿ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಎ.14ರಂದು ನಡೆಯಿತು.

ಸಭಾ ಕಾರ್ಯಕ್ರಮದ ಆರಂಭದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ಎಚ್.ಕೆ ಕೃಷ್ಣಮೂರ್ತಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಿಸಿಬಿ ಘಟಕದ ಸಹಾಯಕ ಪೊಲೀಸ್ ಆಯುಕ್ತ ಪಿ ಎ ಹೆಗ್ಡೆ, ಮಂಗಳೂರು ಅಬಕಾರಿ ಉಪಯುಕ್ತರಾದ ಶ್ರೀಮತಿ ಬಿಂದುಶ್ರೀ, ಮಂಗಳೂರು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬಿಕೆ ಹರಿಪ್ರಸಾದ್, ಪುತ್ತೂರು ಗಾಯಕರಾದ ಶಿವಾನಂದ ಶೆಣೈ, ಮಹಾ ಲೆಕ್ಕ ಪರಿಶೋಧಕ ಕಚೇರಿ ಬೆಂಗಳೂರು ಇದರ ಅಧಿಕಾರಿ ಸುನಿಲ್ ಬಾಳಿಗರ್, ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.

ಶಿಬಿರದಲ್ಲಿ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು,ಪೋಷಕರು ಭಾಗವಹಿಸಿದ್ದರು.
ಖ್ಯಾತ ರಂಗ ಕಲಾವಿದ ಸಂಪನ್ಮೂಲ ವ್ಯಕ್ತಿ ಕೃಷ್ಣಪ್ಪ ಬಿಂಬಿಲ ಕಾರ್ಯಕ್ರಮ ನಿರೂಪಿಸಿ ಶಿಬಿರದ ರೂವಾರಿ ಮಂಗಳೂರು ಸರಕಾರಿ ಸಹಾಯಕ ಅಭಿಯೋಜಕ ಬಿ ಜನಾರ್ದನ್ ಸ್ವಾಗತಿಸಿದರು. ಪತ್ರಕರ್ತ ಹಸೈನಾರ್ ಜಯನಗರ ವಂದಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಅತಿಥಿಗಳಿಗೆ ಸಂಘಟಕರ ವತಿಯಿಂದ ಭಾರತ ರತ್ನ ಅಂಬೇಡ್ಕರ್ರವರ ಜೀವನ ಆಧಾರದ ಪುಸ್ತಕವನ್ನು ಸ್ಮರಣಿಕೆಯಾಗಿ ನೀಡಲಾಯಿತು.

ನಿರಂತರ 9 ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ರಂಗ ಕಲಾ ಚಟುವಟಿಕೆಗಳು, ನುಡಿಮುತ್ತು, ಗೂಡು ದೀಪ ತಯಾರಿ, ವಿವಿಧ ಕಲಾ ಕೃತಿಗಳ ತಯಾರಿ, ಮಕ್ಕಳಿಗೆ ಮಕ್ಕಳ ಹಕ್ಕು ಕಾನೂನು ಮಾಹಿತಿ, ನಟನೆ ಮತ್ತು ಮುಖವರ್ಣಿಕೆ, ನುಡಿಮುತ್ತು ಭಾಷಣ ಕಲೆ, ವರ್ಲಿ ಕಲೆ ಚಿತ್ರಕಲೆ, ರಂಗ ಸಂಗೀತ, ವರ್ಣ ಚಿತ್ತಾರ, ರಂಗ ಚಾವಡಿಯಲ್ಲಿ ರಂಗಕಲೆ ಮುಂತಾದ ಕಾರ್ಯಕ್ರಮಗಳ ಬಗ್ಗೆ ಶಿಬಿರಗಳು ನಡೆಯಲಿದೆ.

ಈ ಶಿಬಿರ ಕಾರ್ಯಕ್ರಮ ಏಪ್ರಿಲ್ 14ರಿಂದ ಆರಂಭಗೊಂಡು 22ರ ವರೆಗೆ ನಡೆಯಲಿದ್ದು ಶಿಬಿರದಲ್ಲಿ ಸಂಗೀತ, ಯೋಗ, ಧ್ಯಾನ, ವ್ಯಕ್ತಿತ್ವ ವಿಕಸನ, ಮತ್ತು ಸಂಸ್ಕೃತಿ, ಆಚಾರ ವಿಚಾರಗಳ ಜೊತೆಗೆ ಸೃಜನ ಶೀಲತೆಯೊಂದಿಗೆ ಪಯಣ ಮುಂತಾದ ವಿಷಯಗಳು ಕುರಿತು ಖ್ಯಾತ ಸಂಪನ್ಮೂಲ ವ್ಯಕ್ತಿಗಳಿಂದ ಶಿಬಿರ ನಡೆಯಲಿದೆ ಎಂದು ಆಯೋಜಕರಾದ ಎಪಿಪಿ ಜನಾರ್ದನ್ ಬಿ ತಿಳಿಸಿದ್ದಾರೆ.