ಮುಖ್ಯಮಂತ್ರಿಯವರ ಚಿತ್ರವಿರುವ ಪೋಸ್ಟರ್ ಹರಿದ ನಾಯಿ ವಿರುದ್ಧ ಪೊಲೀಸ್ ದೂರು
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಹರಿದ ನಾಯಿಯ ವಿರುದ್ಧ ತೆಲುಗು ದೇಶಂ ಪಕ್ಷದ(ಟಿಡಿಪಿ) ನಾಯಕಿಯೊಬ್ಬರು ದೂರು ದಾಖಲಿಸಿದ ವಿಚಿತ್ರ ಘಟನೆ ವಿಜಯವಾಡದಲ್ಲಿ ನಡೆದಿದೆ.

ನಾಯಿಯ ವಿರುದ್ಧ ಪಾಯಕರಾವ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಟಿಡಿಪಿ ನಾಯಕಿ ದಾಸರಿ ಉದಯ ಶ್ರೀ, ಮಹಾನ್ ವ್ಯಕ್ತಿಯನ್ನು ಅವಮಾನಿಸಿರುವ ನಾಯಿ ರಾಜ್ಯದ ಆರು ಕೋಟಿ ಜನರಿಗೆ ನೋವುಂಟು ಮಾಡಿದೆ. ಕೃತ್ಯದ ಹಿಂದಿರುವ ನಿಜವಾದ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದೀಗ ನಾಯಿಯ ವಿರುದ್ಧ ನೀಡಿರುವ ದೂರು ಚರ್ಚೆಯಾಗುತ್ತಿದೆ.