ಕರಾವಳಿ

ಸುಳ್ಯದ ಜನಸ್ನೇಹಿ ವೈದ್ಯ ಡಾ.ಹಿಮಕರ ಕೆ.ಎಸ್ ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿ

ಸುಳ್ಯ: ಜನಪ್ರಿಯ ವೈದ್ಯರಾಗಿ ಗುರುತಿಸಿಕೊಂಡಿದ್ದ ಜನಸ್ನೇಹಿಯಾಗಿದ್ದ ಸುಳ್ಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ.ಹಿಮಕರ ಕೆ.ಎಸ್.ಅವರು ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತರಾಗಿದ್ದಾರೆ.

ತಮ್ಮ 30 ವರ್ಷಗಳ ಸರಕಾರಿ ಸೇವೆಯಿಂದ ಅವರು ಮಾ.31ರಂದು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇನ್ನೂ 6 ವರ್ಷಗಳ ಸೇವಾ ಅವಧಿ ಉಳಿದಿರುವಂತೆಯೇ ಅವರು ಸ್ವಯಂ ನಿವೃತ್ತಿ‌ ಪಡೆದಿದ್ದಾರೆ.

1993ರಲ್ಲಿ ವೈದ್ಯರಾಗಿ ಸರಕಾರಿ ಸೇವೆಗೆ ಸೇರಿದ್ದ ಡಾ.ಹಿಮಕರ ಅವರು ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ ಬಳಿಕ ಕೆಎಂಸಿಯಲ್ಲಿ ವೈದ್ಯಕೀಯ ಪಿಜಿ ಪಡೆದರು. ಬಳಿಕ ಮಡಿಕೇರಿ ಜಿಲ್ಲಾ ಆಸ್ಪತ್ರಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು.ಆ ನಂತರ ಸುಳ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಎರಡು ವರ್ಷಗಳ ಹಿಂದೆ ಅವರು ಸ್ವಯಂ ನಿವೃತ್ತಿ ಬಯಸಿ ಅರ್ಜಿ‌ ಸಲ್ಲಿಸಿದ್ದರು. ಇದೀಗ ಸರಕಾರ ಅವರಿಗೆ ಸ್ವಯಂ ನಿವೃತ್ತಿ ನೀಡಿದೆ. ಖ್ಯಾತ ಹಾಗೂ ಜನಪ್ರಿಯ ವೈದ್ಯರಾಗಿ ಗುರುತಿಸಿಕೊಂಡಿದ್ದ ಹಿಮಕರ್ ಅವರು ಸರಕಾರಿ ಆಸ್ಪತ್ರೆಯಲ್ಲಿ ಅತೀ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಸರಕಾರಿ ಸೇವೆಯಿಂದ ನಿವೃತ್ತರಾದರೂ ಸುಳ್ಯ ತನ್ನ ಖಾಸಗೀ ಕ್ಲೀನಿಕ್‌ನಲ್ಲಿ ಜನರ ಸೇವೆಗೆ ಲಭ್ಯರಿರುತ್ತೇನೆ ಎಂದು ಡಾ.ಹಿಮಕರ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!