ಹಿಂದೂ ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್’ಗೆ ನೀಡಿದ್ದ ಭದ್ರತೆ ವಾಪಸ್
ಮಂಗಳೂರು: ಹಿಂದೂ ಸಂಘಟನೆಯ ಮುಖಂಡ ಮತ್ತು ಶ್ರೀ ನಾರಾಯಣಗುರು ವಿಚಾರ ವೇದಿಕೆಯ ರಾಜ್ಯ ಸಮಿತಿ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅವರಿಗೆ ಸರ್ಕಾರದಿಂದ ನೀಡಲಾಗಿದ್ದ ಭದ್ರತೆಯನ್ನು ವಾಪಾಸ್ ಪಡೆಯಲಾಗಿದೆ.
ರಾಜ್ಯ ವಿಧಾನ ಸಭಾ ಚುನಾವಣೆ ಘೊಷಣೆಯ ಸಂದರ್ಭದಲ್ಲೇ ಸತ್ಯಜಿತ್ ಅವರ ಅಂಗರಕ್ಷಕನನ್ನು ವಾಪಸ್ ಪಡೆದಿರುವುದು ಚರ್ಚೆಗೆ ಕಾರಣವಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೆದರಿಕೆ ಇರುವುದರಿಂದ ತನಗೆ ಅಂಗ ರಕ್ಷಕನ ಅವಶ್ಯಕತೆ ಇದೆ ಎಂದು ಸತ್ಯಜಿತ್ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.