‘ನ್ಯೂಸ್ ಬೈಟ್ಸ್’ ವರದಿ ಫಲಶ್ರುತಿ: ಅಡ್ಕಾರು ಕೇಬಲ್ ಅಳವಡಿಕೆಗೆ ತೆಗೆದಿದ್ದ ಗುಂಡಿ ಮುಚ್ಚಿಸಿದ ಅಧಿಕಾರಿಗಳು
ಸುಳ್ಯ: ಅಡ್ಕಾರು ಸಮೀಪ ಬಿಎಸ್ಎನ್ಎಲ್ ಕೇಬಲ್ ಅಳವಡಿಕೆಗೆ ಕಳೆದ 15 ದಿನಗಳ ಹಿಂದೆ ತೆಗೆದಿದ್ದ ಗುಂಡಿಯನ್ನು ಮುಚ್ಚದೇ ಇರುವ ಬಗ್ಗೆ ಮತ್ತು ಸಂಭಾವ್ಯ ಅಪಾಯದ ಬಗ್ಗೆ ಇಂದು ಬೆಳಿಗ್ಗೆ (ಮಾ.16) ನ್ಯೂಸ್ ಬೈಟ್ಸ್ ವೆಬ್ಸೈಟ್’ನಲ್ಲಿ ವರದಿ ಪ್ರಕಟಿಸಲಾಗಿತ್ತು.

ವರದಿ ಬಿತ್ತರಗೊಂಡ ಕೆಲವೇ ಗಂಟೆಗಳಲ್ಲಿ ಸ್ಪಂಧಿಸಿದ ಜಾಲ್ಸೂರು ಗ್ರಾಮ ಪಂಚಾಯತ್ ಪಿಡಿಓ ಗುಂಡಿಗೆ ಮಣ್ಣು ಹಾಕಿಸಿ ದುರಸ್ತಿ ಪಡಿಸಿದ್ದಾರೆ. ಅಧಿಕಾರಿಗಳ ಈ ಸ್ಪಂದನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ ಬೈಟ್ಸ್ ಬೆಳಿಗ್ಗೆ ಮಾಡಿದ್ದ ಸುದ್ದಿಯ ಲಿಂಕ್ ಇಲ್ಲಿ ನೀಡಲಾಗಿದೆ. http://newsbites.in/post/6449