ಹಲವು ವರ್ಷಗಳ ರಸ್ತೆಯ ಬೇಡಿಕೆ ಈಡೇರಿಸಿ ಪ್ರಶಂಸೆಗೆ ಪಾತ್ರವಾದ ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ
ಪುತ್ತೂರು: ಪಡುವನ್ನೂರು ಗ್ರಾಮದ ಕುತ್ಯಾಳ ಹೊಸಮನೆ ಎಂಬಲ್ಲಿ 10 ಮನೆಗಳಿಗೆ ಹೋಗಲು ಸರಿಯಾದ ರಸ್ತೆ ಇಲ್ಲದಿರುವುದನ್ನು ಮನಗಂಡ ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ರಸ್ತೆ ಕಾಮಗಾರಿ ಕಾರ್ಯಕ್ಕೆ ಚಾಲನೆ ನೀಡಿ ಸ್ಥಳೀಯರ ಬಹುಕಾಲದ ಬೇಡಿಕೆ ಈಡೇರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿರುವ ಅಶೋಕ್ ರೈ ಅವರು ತಮ್ಮ ಹಿಂದಿನ ಸಮಾಜ ಸೇವೆಯನ್ನು ಮುಂದುವರಿಸಿದ್ದಾರೆ. ಕ್ಷೇತ್ರದಲ್ಲಿ ನಿರಂತರ ಓಡಾಟ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಿದ್ದಾರೆ.
ಹೊಸಮನೆ ಎಂಬಲ್ಲಿ ವಾಸವಾಗಿರುವ ಸುಮಾರು ೧೦ ಮನೆಯವರಿಗೆ ತಮ್ಮ ಮನೆಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೇ ಹಲವಾರು ವರ್ಷಗಳಿಂದ ಸಮಸ್ಯೆಗೆ ಸಿಲುಕಿದ್ದರು. ಈ ಬಗ್ಗೆ ಸ್ಥಳೀಯ ಕೆಲವರು ಅಶೋಕ್ ಕುಮಾರ್ ರೈ ಅವರಲ್ಲಿ ಹೇಳಿಕೊಂಡಿದ್ದು ಅದಕ್ಕೆ ಅಶೋಕ್ ರೈ ಅವರು ತಕ್ಷಣ ಸ್ಪಂಧಿಸಿದ್ದಾರೆ. ಮಾ.14ರಂದು ಸ್ಥಳಕ್ಕೆ ಭೇಟಿ ನೀಡಿದ ಅಶೋಕ್ ರೈ ಅವರು ಸ್ಥಳಿಯರೊಂದಿಗೆ ಮಾತುಕತೆ ನಡೆಸಿದ್ದು ಈ ಸಂದರ್ಭದಲ್ಲಿ ರಸ್ತೆಗೆ ಬೇಕಾದ ಜಾಗವನ್ನು ಬಿಟ್ಟು ಕೊಡಲು ಜಾಗದ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ.
ರಸ್ತೆ ನಿರ್ಮಾಣ ಕಾಮಗಾರಿಯ ವೆಚ್ಚವನ್ನು ನಾನೇ ಭರಿಸುವುದಾಗಿ ಅಶೋಕ್ ಕುಮಾರ್ ರೈ ಹೇಳಿದರು. ಅದರಂತೆ ಜೆಸಿಬಿ ಮೂಲಕ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ರಸ್ತೆ ನಿರ್ಮಾಣ ಕಾರ್ಯಕ್ಕೆ ಸ್ಥಳೀಯರು ಸಹಕಾರ ನೀಡಿದರು.
ನಮ್ಮ ಬಹುಕಾಲದ ರಸ್ತೆ ಬೇಡಿಕೆ ಅಶೋಕ್ ಕುಮಾರ್ ರೈ ಅವರಿಂದಾಗಿ ಈಡೇರಿದ್ದು ನಮಗೆಲ್ಲಾ ಬಹಳ ಖುಷಿಯಾಗಿದೆ. ಅಶೋಕ್ ಕುಮಾರ್ ರೈ ಅವರಿಗೆ ಜನ ಸೇವೆ ಮಾಡಲು ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಸ್ಥಳೀಯ ನಿವಾಸಿಗಳು ಹೇಳಿದರು. ಅಶೋಕ್ ರೈ ಅವರು ಚುನಾವಣೆಯಲ್ಲಿ ಗೆದ್ದು ಇದೇ ರಸ್ತೆಯಲ್ಲಿ ಮುಂದಕ್ಕೆ ಬರುವಂತಾಗಲಿ ಎಂದು ಸ್ಥಳೀಯ ಹಿರಿಯ ವ್ಯಕ್ತಿಯೋರ್ವರು ಹೇಳಿದರು.
ಈ ಸಂದಭದಲ್ಲಿ ಮಾತನಾಡಿದ ಅಶೋಕ್ ಕುಮಾರ್ ರೈ ಅವರು ಪುರಾತನ ಕಾಲದಿಂದಲೂ ಪಡುವನ್ನೂರು ಗ್ರಾಮದ ಕುತ್ಯಾಳ ಹೊಸಮನೆ ಎಂಬಲ್ಲಿಗೆ ಸಂಪರ್ಕ ರಸ್ತೆ ಇಲ್ಲದ ಕಾರಣ ಸ್ಥಳೀಯರು ತೊಂದರೆಗೆ ಒಳಗಾಗಿದ್ದರು. ಅಲ್ಲಿನ ನಿವಾಸಿಗಳ ಮನವಿ ಮೇರೆಗೆ ನಾನು ಸ್ಥಳಕ್ಕೆ ತೆರಳಿ ಸ್ಥಳೀಯರನ್ನು ಒಟ್ಟು ಸೇರಿಸಿ ಮಾತುಕತೆ ನಡೆಸಿ ಎಲ್ಲರ ಮನವೊಲಿಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ರಸ್ತೆ ನಿರ್ಮಾಣ ಕಾಮಗಾರಿಯ ಪೂರ್ತಿ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಹೇಳಿದರು