ಸುಬ್ರಹ್ಮಣ್ಯ: ಬೈಕ್ ಸ್ಕಿಡ್ ಆಗಿ ಓರ್ವ ಯುವಕ ಮೃತ್ಯು, ಮತ್ತೋರ್ವನಿಗೆ ಗಾಯ
ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಓರ್ವ ಮೃತಪಟ್ಟು,ಮತ್ತೋರ್ವ ಗಾಯಗೊಂಡ ಘಟನೆ ಮಾ.10 ರಾತ್ರಿ ಸುಬ್ರಹ್ಮಣ್ಯ ಇಂಜಾಡಿ ಬಳಿ ನಡೆದಿದೆ.

ಮೃತ ವ್ಯಕ್ತಿ ಸುಬ್ರಹ್ಮಣ್ಯದ ಕಲ್ಲಗುಡ್ಡೆ ನಿವಾಸಿ ರಮೇಶ್ ಎಂದು ತಿಳಿದು ಬಂದಿದೆ.
ಕೇರಳ ರಸ್ತೆ ಸಾರಿಗೆಗೆ ಸಂಬಂಧಪಟ್ಟ ಮಲಬಾರ್ ಬಸ್ಸನ್ನು ಓವರ್ ಟೆಕ್ ಮಾಡಿ ಹೋಗುತ್ತಿದ್ದ ಸಂದರ್ಭ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ರಮೇಶ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮತ್ತೊಬ್ಬ ಗಾಯಾಳು ಸಣ್ಣ ಪುಟ್ಟ ಗಾಯದಿಂದ ಪಾರಾಗಿರುವುದ್ದಾರೆ ಎನ್ನಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.