ಚುನಾವಣೆ ಹಿನ್ನೆಲೆ: ಅಪರಾಧ ಪ್ರವೃತ್ತಿಯುಳ್ಳ ದ.ಕ ಜಿಲ್ಲೆಯ 11 ಮಂದಿಯನ್ನು ಗಡಿಪಾರು ಮಾಡಲು ಆದೇಶ
ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಅಧೀಕ್ಷಕರ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ವಿಚಾರಣೆ ಕೈಗೊಂಡು ಅಪರಾಧ ಪ್ರವೃತ್ತಿಯುಳ್ಳ ಹಾಗೂ ಸಮಾಜದ ಸ್ವಾಸ್ಥಕ್ಕೆ ಗಂಡಾಂತಕಾರಿಯಾದ 11 ವ್ಯಕ್ತಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ 6.3.2023ರಿಂದ 6. 9.2023 ರ ವರೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

ಗಡಿಪಾರಿಗೆ ಆದೇಶವಾಗಿರುವ 11 ಮಂದಿಯಲ್ಲಿ
ಬಂಟ್ವಾಳ ನಗರದ ನಜೀರ್ ಕುಣಿಗಲ್, ಇಬ್ರಾಹಿಂ ಕಲೀಲ್, ಪುತ್ತೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಜಯರಾಜ್ ರೈ, ಪುತ್ತೂರು ನಗರ ಇಬ್ರಾಹಿಂ, ಹಕೀಮ್ ಕೂರ್ನಡ್ಕ, ಬೆಳ್ಳಾರೆ ಠಾಣೆ ವ್ಯಾಪ್ತಿಯ ರೋಷನ್, ಪ್ರಸಾದ್, ಉಪ್ಪಿನಂಗಡಿ ವ್ಯಾಪ್ತಿಯ ಅಬೂಬಕ್ಕರ್ ಸಿದ್ದಿಕ್, ಉಬೈದ್ ಬಿ ಎಸ್, ತಸ್ಲೀಮ್, ಧರ್ಮಸ್ಥಳ ವ್ಯಾಪ್ತಿಯ ಕಿರಣ್ ಕುಮಾರ್ ಡಿ ಎಂಬವರಾಗಿರುತ್ತಾರೆ.