ಕರಾವಳಿ

ಎಸ್‌ಎಂಎ ರಾಜ್ಯ ಸಮಿತಿಯಿಂದ ಕಾವು ಬದಿಯಡ್ಕದಲ್ಲಿ ನೂತನ ಮದರಸ ಕಟ್ಟಡಕ್ಕೆ ಶಿಲಾನ್ಯಾಸ

ಪುತ್ತೂರು: ಕಾವು ಸಮೀಪದ ಬದಿಯಡ್ಕ ಅಮ್ಚಿನಡ್ಕದಲ್ಲಿ ಸುನ್ನಿ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (ಎಸ್‌ಎಂಎ) ರಾಜ್ಯ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಲ್ಪಡುವ ಸಿರಾಜುಲ್ ಹುದಾ ಮದ್ರಸ ಕಟ್ಟಡದ ಶಿಲಾನ್ಯಾಸ ಫೆ.27ರಂದು ಬದಿಯಡ್ಕದಲ್ಲಿ ನಡೆಯಿತು.

ಶಿಲಾನ್ಯಾಸವನ್ನು ಎಸ್‌ಎಂಎ ಸಂಘಟನೆಯ ರಾಜ್ಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ ನಿರ್ವಹಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಎಸ್‌ಎಂಎ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮದನಿ ಜಪ್ಪು ಉದ್ಘಾಟಿಸಿದರು.

ಅಬ್ದುಲ್ ರೆಹಮಾನ್ ಸಖಾಫಿ ಬದಿಯಡ್ಕರವರು ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖಂಡರುಗಳಾದ ಅಶ್ರಫ್ ಸಖಾ ಮಾಡಾವು, ರಾಜ್ಯ ಸಮಿತಿ ಕೋಶಾಧಿಕಾರಿ ಹಮೀದ್ ಹಾಜಿ ಕೊಡುಂಗಾಯಿ, ಇಬ್ರಾಹಿಂ ಸಖಾಫಿ ಪುಂಡೂರು, ಸ್ವಾದಿಕ್ ಮಾಸ್ತರ್, ಹಾಜಿ ಮುಸ್ತಫಾ ಕೆ ಎಂ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಎಸ್‌ಎಂಎ ಬೆಳ್ಳಾರೆ ಝೋನಲ್ ಅಧ್ಯಕ್ಷ ಇಬ್ರಾಹಿಂ ಬೀಡು, ಸುಳ್ಯ ರೀಜಿನಲ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಕಾರ್ಯದರ್ಶಿ ಅಬ್ದುಲ್ ಲತೀಫ್ ಗೂನಡ್ಕ, ಇಸ್ಮಾಯಿಲ್ ವೇಣೂರು, ಮೊಹಮ್ಮದ್ ಹಾಜಿ, ಅಬೂಬಕ್ಕರ್ ಹಾಜಿ ಕೋಡಿಂಬಾಳ, ಸುಳ್ಯ ರೇಂಜ್ ಎಸ್‌ಜೆಎಂ ಅಧ್ಯಕ್ಷ ಮಹಮ್ಮದ್ ಸಖಾಫಿ, ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರು, ಅಬೂಬಕ್ಕರ್ ಮುಸ್ಲಿಯರ್, ಇಬ್ರಾಹಿಂ ಮುಸ್ಲಿಯಾರ್, ಮೂಸ ಕುಂಞಿ, ಅಬ್ದುಲ್ಲ ಕಾಂಟ್ರಾಕ್ಟರ್ ಮೊದಲದವರು ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ ಸ್ವಾಗತಿಸಿದರು. ಬೆಳ್ಳಾರೆ ಝೋನಲ್ ಸಮಿತಿ ಪ್ರ.ಕಾರ್ಯದರ್ಶಿ ಅಬ್ದುಲ್ಲಾ ಅಹ್ಸನಿ ಕಾರ್ಯಕ್ರಮ ನಿರೂಪಿಸಿ,ದರು. ಅಬ್ದುಲ್ ಹಮೀದ್ ಸುಣ್ಣಮೂಲೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!