ಮುಂಬೈ: 10ನೇ ರಾಷ್ಟ್ರೀಯ ಹ್ಯಾಪ್ಕಿಡೋ ಚಾಂಪಿಯನ್‌ಶಿಪ್ ನಲ್ಲಿ ಸುಳ್ಯದ ಚಾನಸ್ಯ ರೆಬತ್ ಛೆಟ್ರಿಗೆ ಚಿನ್ನದ ಪದಕ
ಮುಂಬೈಯಲ್ಲಿ ಫೆ 11ಮತ್ತು 12 ರಂದು ನಡೆದ ಅಂತರಾಷ್ಟ್ರೀಯ ಹ್ಯಾಪ್ಕಿಡೋ ಫೆಡರೇಶನ್ – ಇಂಡಿಯಾ ಸ್ಪರ್ಧೆಯಲ್ಲಿ ಸುಳ್ಯದ ಕಲ್ಮಕ್ಕಾರು ನಿವಾಸಿ ರೆಬಟ್ ಛೆತ್ರಿ ಹಾಗೂ ವಿದ್ಯಾ ಗೌಡ ಛೆತ್ರಿ ರವರ ಪುತ್ರಿ ಚಾನಸ್ಯ ರೆಬತ್ ಛೆತ್ರಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕ್ಯೋರುಕಿಯಲ್ಲಿ (ಫ್ರೀ ಫೈಟಿಂಗ್) ಚಿನ್ನದ ಪದಕ ಮತ್ತು ಬಾಲ್ ಚಾಗಿಯಲ್ಲಿ (ಕಿಕ್ಸ್ ಸ್ಪರ್ಧೆ) ಕಂಚಿನ ಪದಕವನ್ನು ಪಡೆದುಕ್ಕೊಂಡಿದ್ದಾರೆ.
ಚಾನಸ್ಯ ತನ್ನ 15 ನೇ ಕಿರಿಯ ವಯಸ್ಸಿನಲ್ಲಿ ಮಾಡಿರುವ ಈ ಸಾಧನೆ ಸರ್ವರಿಂದ ಪ್ರಶಂಸೆ ವ್ಯಕ್ತವಾಗಿದೆ.
ಚಾನಸ್ಯ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.
ಹ್ಯಾಪ್ಕಿಡೋ ಒಂದು ಕೊರಿಯನ್ ಸಮರ ಕಲೆಯಾಗಿದ್ದು
ತನ್ನ ತಂದೆ ರೆಬತ್ ಛೆಟ್ರಿ ಅವರಿಂದ ತರಬೇತಿ ಪಡೆದಿರುವ ಚಾನಸ್ಯ ನಿಯಮಿತವಾಗಿ ಅಭ್ಯಾಸ ಮಾಡಿರುತ್ತಾರೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಹ್ಯಾಪ್ಕಿಡೋದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇನೆ ಎಂದು ಚಾನಸ್ಯ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.